ದೊಡ್ಡಬಳ್ಳಾಪುರ: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆಗಳು ಕೈಗೊಂಡಿರುವ ಆಪರೇಷನ್ ಸಿಂಧೂರ್ (Operation Sindoor) ಪ್ರತಿಕಾರದ ದಾಳಿ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಲಾಡು ಹಂಚಿ ಸಂಭ್ರಮಿಸಲಾಗಿದೆ.
ಈ ವೇಳೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಮಾತನಾಡಿ, ನಮ್ಮನ್ನು ಕೆಣಕಿದರೆ ಕೈಕಟ್ಟಿ ಕೂರುವುದಿಲ್ಲ, ಸೂಕ್ತವಾದ ಬುದ್ದಿ ಕಲಿಸ್ತೀವಿ. ಭಾರತದ ಸಹನೆ ಕಳೆದುಕೊಂಡರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಕಳೆದ ರಾತ್ರಿ ನಡೆದ ಪ್ರತಿಕಾರದ ದಾಳಿ ಸಾಕ್ಷಿಯಾಗಿದೆ.
ಪಹಲ್ಗಾಮ್ ದಾಳಿಗೆಯಲ್ಲಿ ಮಡಿದ ಅಮಾಯಕರ ಸಾವಿಗೆ ಆಪರೇಷನ್ ಸಿಂಧೂರ್ ಸ್ವಲ್ಪ ನೆಮ್ಮದಿ ತಂದಿದೆ. ಇದಕ್ಕೆ ನಮ್ಮ ದೇಶದ ವೀರ ಯೋಧರಿಗೆ ಸಲ್ಯೂಟ್ ಮಾಡಬೇಕಿದೆ.

ನಮ್ಮ ಹೆಣ್ಣುಮಕ್ಕಳ ಅಣೆಯ ಮೇಲಿನ ಸಿಂಧೂರವನ್ನು ಅಳಸಿದ ಪಾಕಿಸ್ತಾನಗಳಿಗೆ ಆಪರೇಷನ್ ಸಿಂಧೂರ್ ಹೆಸರನ್ನು ನಮ್ಮ ಯೋಧರು ನುಗ್ಗಿ ಹೊಡೆದಿದ್ದಾರೆ. ಪಾಕಿಸ್ತಾನ ಇನ್ನಾದರೂ ಬುದ್ದಿ ಕಲಿಯಬೇಕು, ಈ ದಾಳಿಗೆ ಮರು ಉತ್ತರ ನೀಡುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದರು.
ಈ ಪ್ರಕರಣದಿಂದ ಯುದ್ಧ ಕೂಡ ನಡೆಯಬಹುದು, ಭಾರತದ ಪ್ರಜೆಗಳಾದ ನಮ್ಮ ಕರ್ತವ್ಯ ಮರೆಯಬಾರದು, ಜಾತಿ, ಧರ್ಮ ಬದಿಗೊತ್ತಿ ಪಾಪಿ ಪಾಕಿಸ್ತಾನದ ವಿರುದ್ಧ ಒಂದಾಗಿ ನಿಲ್ಲಬೇಕು ಎಂದರು.