ದೊಡ್ಡಬಳ್ಳಾಪುರ: ಮಾರ್ಗಮಧ್ಯದಲ್ಲಿ ಸಾಗುತ್ತಿದ್ದ KSRTC ಬಸ್ ಟೈರ್ ಸ್ಪೋಟಗೊಂಡ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ತಡೆಗೋಡೆಗಳಿಗೆ ಡಿಕ್ಕಿಹೊಡೆದಿರುವ ಘಟನೆ ತಾಲೂಕಿನ ಮೆಣಸಿ ಗೇಟ್ ಬಳಿ ಸಂಭವಿಸಿದೆ.
ಸೂಲುಕುಂಟೆಯಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ವೇಳೆ ಮಾರ್ಗಮಧ್ಯದಲ್ಲಿ ಏಕಾಏಕಿ ಟೈರ್ ಸ್ಪೋಟಗೊಂಡ ಕಾರಣ, ವೇಗವಾಗಿ ರಸ್ತೆ ಬದಿಯ ತಡೆ ಕಂಬಿಗಳ ಮೇಲೆ ಸಾಗಿದೆ, ಚಾಲಕನ ಮುಂಜಾಗ್ರತೆಯಿಂದ ಸಂಭವಿಸಬಹುದಾಗಿದ್ದ ದೊಡ್ಡಮಟ್ಟದ ಪ್ರಮಾದ ತಪ್ಪಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇತರೆ ಬಸ್ಸುಗಳ ಮೂಲಕ ಕಳುಹಿಸಲಾಗಿದೆ.
ಸಾರಿಗೆ ಬಸ್ಸುಗಳಿಗೆ ಗುಣ್ಣಮಟ್ಟವಿಲ್ಲದ ರಿಬಿಲ್ಟ್ ಟೈರ್‌ಗಳನ್ನು ಬಳಸುವ ಕಾರಣ ಈ ರೀತಿಯ ಅವಘಡಗಳಿಗೆ ಕಾರಣ ಆಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.