ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಾಪಿ ಪಾಕಿಸ್ತಾನದ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಸೇನೆಯ ಸೈನಿಕರು (Indian Army soldiers) ಹುತಾತ್ಮರಾಗಿದ್ದಾರೆ.
ಮುರಳಿ ನಾಯಕ್
ಆಂಧ್ರ ಪ್ರದೇಶಕ್ಕೆ ಸೇರಿದ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಏಕೈಕ ಪುತ್ರ ಮುರಳಿ ನಾಯಕ್ (28 ವರ್ಷ) ಹುತಾತ್ಮರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಜವಾನ್ ಸಚಿನ್ ಯಾದವರಾವ್ ವನಂಜೆ
ಇನ್ನೋಂದು ದುರ್ಘಟನೆಯಲ್ಲಿ ಸಚಿನ್ ಯಾದವ್ ರಾವ್ (29 ವರ್ಷ) ವನಂಜೆಯವರ ಹುಟ್ಟೂರು ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ ನಾಂದೇಡ್ ಜಿಲ್ಲೆಯ ತಮ್ಲೂರು ಗ್ರಾಮದವರಾಗಿದ್ದಾರೆ.
ಸಚಿನ್ ಯಾದವ್ ರಾವ್ ವನಂಜೆ ಅವರ ಪಾರ್ಥಿವ ಶರೀರ ಇಂದು ಅವರ ಹುಟ್ಟೂರಿಗೆ ತಲುಪಲಿದೆ ಎಂದು ವರದಿಯಾಗಿದೆ.