ನವದೆಹಲಿ: ನಾಗರೀಕರ ಗುರಿಯಾಗಿಸಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಪಟ್ಟಣದ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೌರಿ ಹೆಚ್ಚುವರಿ ಉಪ ಆಯುಕ್ತ ರಾಜ್ ಕುಮಾರ್ ಥಾಪಾ (Raj Kumar Thappa) ನಿಧನರಾಗಿದ್ದಾರೆ.
ಪಾಕಿಸ್ತಾನಿ ಸೇನೆ ಹಾರಿಸಿದ ಶೆಲ್ ರಾಜೌರಿ ಹೆಚ್ಚುವರಿ ಉಪ ಆಯುಕ್ತ ರಾಜ್ ಕುಮಾರ್ ಅವರ ನಿವಾಸಕ್ಕೆ ಬಡಿದಿದ್ದು, ಅಧಿಕಾರಿ ಗಂಭೀರವಾಗಿ ಗಾಯಗೊಂಡು ಅವರ ಸಾವಿಗೆ ಕಾರಣವಾಗಿದೆ ಎಂದು ಸೇನೆ ಖಚಿತ ಪಡಿಸಿದೆ.
ಈ ಕುರಿತಂತೆ ಸಿಎಂ ಉಮರ್ ಅಬ್ದುಲ್ಲ ಸಂತಾಪ ಸೂಚಿಸಿದ್ದಾರೆ. ಈ ಟ್ವಿಟ್ ಮಾಡಿರುವ ಅವರು, ರಾಜೌರಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ನಾವು ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಸಮರ್ಪಿತ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ.
ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು.
ಇಂದು ಅಧಿಕಾರಿಯ ನಿವಾಸದ ಮೇಲೆ ಪಾಕ್ ಶೆಲ್ ದಾಳಿ ನಡೆದು, ರಾಜೌರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪ್ಪಾ ಸಾವನ್ನಪ್ಪಿದ್ದಾರೆ.
ಈ ಭೀಕರ ಜೀವಹಾನಿಯಿಂದ ನನ್ನ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.