ಹುಬ್ಬಳ್ಳಿ: ದಶಕಗಳಿಂದ ಹಿಂದೂಗಳ ರಕ್ತ ಹರಿಸಿದ್ದ ಪಾಕಿಸ್ತಾನದ ನಿರ್ನಾಮದ ವರೆಗೆ ಹಿಂದೆ ಸರಿಯುವುದಿಲ್ಲ ಎಂದು ನಂಬಿದ್ದ ಭಾರತೀಯರಿಗೆ ಪ್ರಧಾನಿ ಮೋದಿ (Prime Minister Modi) ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕದನ ವಿರಾಮ ಘೋಷಣೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಯೂ ಪಾಕಿಸ್ತಾನ ಕದನ ವಿರಾಮ ಎಂದು, ಎಷ್ಟೋ ಮಂದಿ ಭಾರತೀಯರನ್ನು ಸಾಯಿಸಿದೆ. ಈಗ ಮತ್ತೆ, ಮುಂದೆ ಇನ್ನು ಎಷ್ಟು ಮಂದಿ ಸಾಯಬೇಕು’ ಎಂದು ಪ್ರಶ್ನಿಸಿದರು.
ಇಷ್ಟು ವರ್ಷ ಪಾಕ್ ನಡೆಸಿದ್ದ ಕ್ರೌರ್ಯ, ಉಗ್ರರ ಕೃತ್ಯಕ್ಕೆ ಪಾಠ ಕಲಿಸಬೇಕಿತ್ತು. ಪ್ರಧಾನಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ ಎಂದರು.
ಅಮೇರಿಕಾ ಅಧ್ಯಕ್ಷ ಟ್ರಂಪ್ ಕದನ ವಿರಾಮದ ಟ್ವಿಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, ನಮ್ಮ ದೇಶದ ಸುರಕ್ಷತೆ, ನಮ್ಮ ದೇಶದ ಜನ ಸಾಯ್ತಾ ಇದ್ದೀವಿ, ನಮ್ಮ ದೇಶದಲ್ಲಿ ರಕ್ತ ಹರಿಸುತ್ತಿದ್ದಾರೆ, ಕದ್ದು ಮುಚ್ಚಿ, ಡೈರೆಕ್ಟ್ ಹಿಂದೂ ಅಂತ ಕೇಳಿಕೊಂಡು ಹೊಡಿತಾರೆ, ಟ್ರಂಪ್ ಅವರೆ ನಿಮಗೆ ಸಂಬಂಧ ಇಲ್ಲ.
ನಮ್ಮ ಆಂತರಿಕ ಸುರಕ್ಷತೆ ದೃಷ್ಟಿಯಿಂದ ನಾವ್ ಯೋಚನೆ ಮಾಡಬೇಕಿದೆ. ಟ್ರಂಪ್ ಆಗಲಿ, ಚೀನಾ ಆಗಲಿ, ಮತ್ಯಾವುದೇ ದೇಶದ ಸಂಬಂಧ ಇಲ್ಲ, ನಾವು ಖುಷಿಯಾಗಿದ್ವಿ. ಇಡೀ ದೇಶ ಮೋದಿ ಅವರ ನೇತೃತ್ವದಲ್ಲಿ ಪೂರ್ಣ ವಿರಾಮ, ಪಾಕಿಸ್ತಾನ ನೂರು ವರ್ಷ ಯಾವುದೇ ಉಸಿರು ಎತ್ತೋದಿಲ್ಲ ಆ ರೀತಿ ಮಾಡ್ತಾರೆ ಎಂದು ವಿಶ್ವಾಸ ಇತ್ತು ನಮಗೆ ಆದರೆ ವಿಶ್ವಾಸ ದ್ರೋಹ ಮಾಡಿದ್ದೀರಿ ಎಂದು ಕಿಡಿಕಾರಿದರು.