ವಿಲ್ಲುಪುರಂ: ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ (Vishal) ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದ ವೇಳೆ ಈ ಅವಘಡ ನಡೆದಿದೆ.
ವಿಶಾಲ್ ಅವರು ವೇದಿಕೆಯ ಮೇಲೇಯೇ ಕುಸಿದು ಬಿದ್ದಿದ್ದಾರೆ. ಪ್ರಸ್ತುತ ವರದಿ ಅನ್ವಯ ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
கூட்டத்தில் மயங்கி விழுந்த விஷால்… விழுப்புரத்தில் பரபரப்பு#vishal | #thanthicinema | #villupuram pic.twitter.com/DgrXSOv9FU
— Thanthi TV (@ThanthiTV) May 11, 2025
ಜ್ವರದಿಂದ ಬಳಲುತ್ತಿದ್ದ ವಿಶಾಲ್ ಅವರು, ಅವಿರತ ಚಟುವಟಿಕೆಗಳ ಕಾರಣ ವಿಶ್ರಾಂತಿಯ ಕೊರತೆಯಿಂದಾಗಿ ಅವರಿಗೆ ಹೀಗಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.