ನೆಲಮಂಗಲ: ಬೆಳ್ಳಂಬೆಳಗ್ಗೆ ಅಡಕಮಾರನಹಳ್ಳಿ ಬಳಿ ಬಾರಿ ಅಗ್ನಿ ಅನಾಹುತ (Fire disaster) ಸಂಭವಿಸಿದ್ದು, ಆಯಿಲ್ ಗೋದಾಮು ಧಗಧಗನೆ ಹೊತ್ತಿ ಉರಿಯುತ್ತಿದೆ.
ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಸಮೀಪದ ಶಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮು ಬೆಂಗಿಗಾಹುತಿಯಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಗೋದಾಮು ಬೆಂಕಿಗಾಹುತಿ ಶಂಕೆ ವ್ಯಕ್ತವಾಗುತ್ತಿದ್ದು, ಬೆಳಗ್ಗಿನ ಜಾವ ಮೂರು ಗಂಟೆಯಲ್ಲಿ ಸಂಭವಿಸಿರಬಹುದು ಎನ್ನಲಾಗಿದೆ.
ನೆಲಮಂಗಲ, ಪೀಣ್ಯಾ, ಯಶವಂತಪುರ ಭಾಗದ 8 ಕ್ಕೂ ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.