ವಿಜಯವಾಡ: ಚಾಲಕನ ನಿಯಂತ್ರಣ ತಪ್ಪಿದ ಕೂಲ್ ಡ್ರಿಂಕ್ (Cool drink) ಸಾಗಿಸುತ್ತಿದ್ದ ವ್ಯಾನ್ ಪಲ್ಟಿಯಾಗಿರುವ ಘಟನೆ (Accident) ಮಚಿಲಿಪಟ್ಟಣಂ ಹೆದ್ದಾರಿಯಲ್ಲಿ ನಡೆದಿದೆ.
ವ್ಯಾನ್ ಪಲ್ಟಿಯಾದ ಪರಿಣಾಮ, ತಂಪು ಪಾನೀಯಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದು, ಇದೇ ದಾರಿಯಲ್ಲಿ ಸಾಗುತ್ತಿದ್ದ ಇತರೆ ವಾಹನ ಸವಾರರು ಮತ್ತು ಸ್ಥಳೀಯರು ರಸ್ತೆಯಲ್ಲಿ ಬಿದ್ದಿದ್ದ ತಂಪು ಪಾನೀಯಗಳ ಪೆಟ್ಟಿಗೆಗಳನ್ನು ಎತ್ತಿಕೊಂಡಿದ್ದಾರೆಂದು ವರದಿಯಾಗಿದೆ.
ಅಪಘಾತದಲ್ಲಿ ವ್ಯಾನ್‌ನಲ್ಲಿದ್ದ ಮೂವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.