ಗೌರಿಬಿದನೂರು: ತೋಟಕ್ಕೆ ನೀರು ಬಿಡುವ ವಿಚಾರದಲ್ಲಿ ದಾಯಾದಿಗಳ ನಡುವೆ ಜಗಳ ನಡೆದು ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 35 ವರ್ಷದ ಗಂಗರಾಜ್ ಕೊಲೆಯಾದ ವ್ಯಕ್ತಿ. ಗಂಗಾಧರಪ್ಪ ಹಾಗೂ ಆತನ ಮಗ ಸೋಮಶೇಖರ್ ಕೊಲೆ ಆರೋಪಿಗಳಾಗಿದ್ದಾರೆ.
ಅಂದಹಾಗೆ ಕೊಲೆಯಾದ ಗಂಗರಾಜ್ ಹಾಗೂ ಈತನ ಚಿಕ್ಕಪ್ಪ ಗಂಗಾಧರಪ್ಪ ನವರು ದಾಯಾದಿಗಳಾಗಿದ್ದು, ಒಂದೇ ಬೋರ್ವೆಲ್ ನಲ್ಲಿ ಬರುತ್ತಿದ್ದ ನೀರನ್ನ ಸರದಿ ಪ್ರಕಾರ ಹಂಚಿಕೊಂಡು ವ್ಯವಸಾಯ ಮಾಡಿಕೊಂಡಿದ್ರು.
ಮೊನ್ನೆ ರಾತ್ರಿ ಸುರಿದ ಮಳೆಗೆ ಗಂಗರಾಜು ತನ್ನ ಎಲೆಕೋಸು ತೋಟಕ್ಕೆ ನೀರು ಹಾಯಿಸಿರಲಿಲ್ಲ ಹೀಗಾಗಿ ಮಾರನೇ ದಿನ ನೀರು ಹಾಯಿಸಲು ಮುಂದಾಗಿದ್ದಾನೆ.
ಈ ವೇಳೆ ತನ್ನ ಚಿಕ್ಕಪ್ಪ ಗಂಗಾಧರಪ್ಪ ನಿನ್ನ ಸರದಿ ಮುಗಿದಿದೆ ಈಗ ನೀರು ಹಾಯಿಸಲು ಬಿಡಲ್ಲ ಎಂದು ಅಡ್ಡಿ ಮಾಡಿದ್ದಾನೆ. ಈ ವಿಚಾರಕ್ಕೆ ಇಬ್ಬರ ನುಡುವೆ ಮಾತಿನ ಚಕಮಕಿ ನಡಿದಿದ್ದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಗಲಾಟೆ ತಾರಕಕ್ಕೇರಿ ಕೈಗೆ ಸಿಕ್ಕ ಮಚ್ಚಿನಿಂದ ಗಂಗಾಧರಪ್ಪ ಹಾಗು ಆತನ ಮಗ ಸೋಮೇಶ್, ಗಂಗರಾಜುನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ವೇಳೆ ಅಡ್ಡ ಬಂದ ಗಂಗರಾಜು ತಮ್ಮ ನಂದೀಶ್ ಮೇಲೂ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿರುವ ನಂದೀಶ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.
ಘಟನೆ ನಂತರ ಕೊಲೆ ಆರೋಪಿಗಳಾದ ಗಂಗಾಧರಪ್ಪ ಹಾಗು ಆತನ ಮಗ ಸೋಮೇಶ್ ನನ್ನು ಗೌರಿಬಿದನೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ.
ತೋಟಕ್ಕೆ ನೀರು ಹಾಯಿಸಲು ಹೋದ ಗಂಗಾಧರ್ ಹೆಣವಾಗಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿರ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ .