ದೊಡ್ಡಬಳ್ಳಾಪುರ: ಮೇ 25ರಂದು ನಿಗದಿಯಾಗಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ಚುನಾವಣೆಯ ದೊಡ್ಡಬಳ್ಳಾಪುರ ನಿರ್ದೆಶಕ ಸ್ಥಾನಕ್ಕೆ ಜೆಡಿಎಸ್ (JDS) ಬೆಂಬಲಿತ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ ಬಮೂಲ್ ಕಚೇರಿಯಲ್ಲಿ ಮಂಡಿಬ್ಯಾಡರಹಳ್ಳಿ ಅಶ್ವಥ್ ನಾರಾಯಣ್, ಹಾಡೋನಹಳ್ಳಿ ನಾರಾಯಣಪ್ಪ, ಹುಸ್ಕೂರು ಆನಂದ್ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದವರಾಗಿದ್ದಾರೆ.
ಇನ್ನೂ ಈ ಕುರಿತಂತೆ ಜೆಡಿಎಸ್ ಮುಖಂಡರು ಸಭೆ ನಡೆಸಿ, ಅಂತಿಮ ಅಭ್ಯರ್ಥಿಯಾರಾಗಲಿದ್ದಾರೆಂದು ತೀರ್ಮಾನಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಮಂಡಿಬ್ಯಾಡರಹಳ್ಳಿ ಅಶ್ವಥ್ ನಾರಾಯಣ್ ಅವರ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ನ್ಯಾಯವಾದಿ ಬೈರೇಗೌಡ, ಶ್ರವಣೂರು ಚೆನ್ನೇಗೌಡ, ವಿಎಸ್ಎಸ್ಎನ್ ಸದಸ್ಯ ರಾಮಮೂರ್ತಿ, ದೊಡ್ಡಬೆಳವಂಗಲ ಹೋಬಳಿ ಜೆಡಿಎಸ್ ಮುಖಂಡ ಹಾದ್ರಿಪುರ ಮಹೇಶ್ ಮತ್ತಿತರರಿದ್ದರು.