IPL tournament restarts from today

ಇಂದಿನಿಂದ IPL ಪಂದ್ಯಾವಳಿ ರೀಸ್ಟಾರ್ಟ್: KKR ವಿರುದ್ಧ ಸೆಣೆಸಲು RCB ಸಜ್ಜು

ಬೆಂಗಳೂರು: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಾರಕ್ಕಕ್ಕೇರಿದ ಹಿನ್ನೆಲೆಯಲ್ಲಿ ಮೇ-8ರಂದು ಸ್ಥಗಿತಗೊಂಡಿದ್ದ ಐಪಿಎಲ್ (IPL) ಪಂದ್ಯಾವಳಿ ಬೆಂಗಳೂರಿನಲ್ಲಿ ಇಂದು ಪುನರಾರಂಭವಾಗಲಿದೆ.

ಅತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕೋಲ್ಕತ್ತಾ ನೈಟ್ ರೈಡ‌ರ್ಸ್ (KKR) ತಂಡವನ್ನು ಎದುರಿಸಲಿದೆ.

ಈಗಾಗಲೇ 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡವು 8 ಪಂದ್ಯಗಳನ್ನು ಗೆದ್ದು, ಟೇಬಲ್ ಟಾಪರ್ ಆಗಿರುವ ಗುಜರಾತ್ ತಂಡದಷ್ಟೇ ಅಂಕಗಳನ್ನು ಪಡೆದಿದ್ದರೂ ಕಡಿಮೆ ರನ್‌ ರೇಟ್ ಹಿನ್ನೆಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಕೋಲ್ಕತ್ತಾ ತಂಡವನ್ನು ಮಣಿಸಿ, ಮತ್ತೆ ಟೇಬಲ್ ಟಾಪರ್ ಸ್ಥಾನದತ್ತ ಪಾಟೀದಾರ್ ಪಡೆ ಕಣ್ಣಿಟ್ಟಿದೆ.

ಮತ್ತೊಂದೆಡೆ 11 ಅಂಕಗಳನ್ನು ಗಳಿಸಿ ಸದ್ಯ 6ನೇ ಸ್ಥಾನದಲ್ಲಿರುವ ಅಜಿಂಕ್ಯಾ ರಹಾನೆ ತಂಡವು ಈ ಪಂದ್ಯವನ್ನು ಅಷ್ಟೇ ಅಲ್ಲದೆ, ಆಡಲು ಬಾಕಿ ಉಳಿದಿರುವ ಇನ್ನೊಂದು ಪಂದ್ಯವನ್ನೂ ಹೆಚ್ಚಿನ ಅಂತರದಲ್ಲಿ ಹೇಗಾದರೂ ಗೆದ್ದು ಪ್ಲೇ ಆಫ್‌ನಲ್ಲಿ ಸ್ಥಾನ ಗಿಟ್ಟಿಸಬೇಕೆನ್ನುವ ಉತ್ಸಾಹದಲ್ಲಿಈಗಾಗಿಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಈಡೆನ್ ಗಾಡೆರ್ನ್ಸ್‌ನಲ್ಲಿ ಮಾಚ್-22ರಂದು ಅತಿಥೇಯ ಕೋಲ್ಕತ್ತಾವನ್ನು ಮಣಿಸಿದ ಆರ್‌ಸಿಬಿ ಶುಭಾರಂಭಮಾಡಿತ್ತು.

ಶನಿವಾರ ಆರ್‌ಸಿಬಿಯನ್ನು ಅದರ ತವರಿನಲ್ಲೇ ಮಣಿಸಿ ಸೇಡು ತೀರಿಸಿಕೊಳ್ಳಬೇಕೆಂಬ ಹಠ ಕೋಲ್ಕತ್ತಾ ತಂಡದ್ದಾಗಿದೆ.

ಮಾರ್ಚ್-28ರಂದು ಗುಜರಾತ್ ವಿರುದ್ದ ನಡೆದ ಪಂದ್ಯದಲ್ಲೂ ಆರ್‌ಸಿಬಿ ಗೆಲುವು ಪಡೆದಿತ್ತು. ಆದರೆ ತನ್ನ ಮೂರನೇ ಪಂದ್ಯದಲ್ಲಿ ಗುಜರಾತ್ ವಿರುದ್ದ ಪರಾಭವಗೊಂಡಿತ್ತು. ಆ ನಂತರದ ಪಂದ್ಯದಲ್ಲಿ ಮುಂಬೈ ವಿರುದ್ದ 12 ರನ್ ಗೆಲುವು ಸಾಧಿಸಿತು.

ಏಪ್ರಿಲ್-10ರಂದು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ, ಆ ಬಳಿಕ 13ರಂದು ರಾಜಸ್ಥಾನ ವಿರುದ್ದ ಗೆದಿತ್ತು, ಏಪ್ರಿಲ್-13ರಂದು ಪಂಜಾಬ್ ವಿರುದ್ಧ ಅದರ ತವರು ನೆಲದಲ್ಲಿ ಆರ್‌ಸಿಬಿ ಪಂದ್ಯವನ್ನು ಕಳೆದು ಕೊಂಡಿತ್ತು. ಆದರೆ ಆ ಬಳಿಕ ರಾಯಲ್ ಚಾಲೆಂಜರ್ಸ್ ಸತತ ವಾಗಿ ನಾಲ್ಕು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಏಪ್ರಿಲ್-20ರಂದು ಪಂಜಾಬ್ ವಿರುದ್ಧ, ಏಪ್ರಿಲ್ -24ರಂದು ರಾಜಸ್ಥಾನ ವಿರುದ್ದ, ಏಪ್ರಿಲ್-27ರಂದು ಡೆಲ್ಲಿ ವಿರುದ್ದ ಹಾಗೂ ಮೇ-3ರಂದು ಚೆನ್ನೈ ವಿರುದ್ದವೂ ಆರ್‌ಸಿಬಿ ಗೆದ್ದು ಗೆಲುವಿನ ನಗೆ ಬೀರಿದ್ದು, ಇದೇಗ ಐಪಿಎಲ್ ಪುನರಾರಂಭದ ಮೊದಲ ಪಂದ್ಯದಲ್ಲಿ ಮತ್ತೆ 5 ಕೋಲ್ಕತ್ತಾ ವಿರುದ್ಧ ಗೆದ್ದು ಪ್ಲೇ ಆಫ್ ಗುಂಪಿನ ಅಗ್ರಸ್ಥಾನದತ್ತ ತನ್ನ ಚಿತ್ತ ನೆಟ್ಟಿದೆ.

ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದ ಕೋಲ್ಕತ್ತಾ ತಂಡ ಇದೀಗ ಆರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಕನಸು ಅದರ ಪಾಲಿಗೆ ಇನ್ನೂ ಕೂಡಾ ಕಬ್ಬಿಣದ ಕಡಲೆ. ಅದು ರಾಜಸ್ಥಾನ ವಿರುದ್ಧ ಎರಡು ಪಂದ್ಯಗಳಲ್ಲಿ, ಹೈದರಾಬಾದ್ ವಿರುದ್ದ ಒಂದು, ಚೆನ್ನೈ ವಿರುದ್ಧ ಒಂದು ಮತ್ತು ಡೆಲ್ಲಿ ವಿರುದ್ಧ ತಲಾ ಒಂದು ಪಂದ್ಯ ಗೆದು ಲಾ ಒಂದು ಪಂದ್ಯ ಗೆದ್ದು ಗೆದ್ದು ಹಾಗೂ ಹಾಗೂ ಪಂಜಾಬ್ ವಿರುದ್ಧ ಪಂದ್ಯ ರದ್ದಾಗಿದ್ದ ಕಾರಣಕ್ಕೆ 1 ಅಂಕ ಗಳಿಸಿ, ಅಂಕಪಟ್ಟಿಯಲ್ಲಿ ಒಟ್ಟು 11 ಅಂಕಗಳನ್ನಷ್ಟೇ ಸಂಪಾದಿಸಲು ಶಕ್ತವಾಗಿದೆ.

ಈಗಾಗಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ದದ ಪಂದ್ಯವೂ ಕೋಲ್ಕತ್ತಾ ಪಾಲಿಗೆ ನಿಜಕ್ಕೂ ಸವಾಲಿನದ್ದೇ ಆಗಿದೆ.

ಫೋಟೋ ಕೃಪೆ: RCB, KKR X

ರಾಜಕೀಯ

ಮುಸ್ಲಿಮರಿಗೆ ಮೀಸಲು ಹೆಚ್ಚಳ ಮಾಡಿರುವುದು ಅಪಚಾರ: ಆರ್‌ ಅಶೋಕ ಕಿಡಿ

ಮುಸ್ಲಿಮರಿಗೆ ಮೀಸಲು ಹೆಚ್ಚಳ ಮಾಡಿರುವುದು ಅಪಚಾರ: ಆರ್‌ ಅಶೋಕ ಕಿಡಿ

ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ಜನರ ಹಕ್ಕನ್ನು ಕಸಿದಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ (R Ashoka)

[ccc_my_favorite_select_button post_id="109571"]
ದೊಡ್ಡಬಳ್ಳಾಪುರ ‘ಕ್ವಿನ್ ಸಿಟಿ’ ಕುರಿತು ಎಡಿಬಿ ಉನ್ನತ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ

ದೊಡ್ಡಬಳ್ಳಾಪುರ ‘ಕ್ವಿನ್ ಸಿಟಿ’ ಕುರಿತು ಎಡಿಬಿ ಉನ್ನತ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ

ದೊಡ್ಡಬಳ್ಳಾಪುರ-ಡಾಬಸ್ ಪೇಟೆ ನಡುವೆ ನಿರ್ಮಾಣವಾಗಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್ ಸಿಟಿ’ (Kwin City) ಯೋಜನೆ ಬಗ್ಗೆ ಏಷ್ಯನ್ ಡೆವಲಪ್ಮೆಂಟ್

[ccc_my_favorite_select_button post_id="109562"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪ್ರೇಯಸಿಯ ಕೊಂದು ಗೋವಾ ಕಾಡಿಗೆಸೆದ ಪಾಗಲ್ ಪ್ರೇಮಿ.. ಬೆಂಗಳೂರಲ್ಲಿ ಬಂಧನ..!

ಪ್ರೇಯಸಿಯ ಕೊಂದು ಗೋವಾ ಕಾಡಿಗೆಸೆದ ಪಾಗಲ್ ಪ್ರೇಮಿ.. ಬೆಂಗಳೂರಲ್ಲಿ ಬಂಧನ..!

ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ತೆರಳಿದ್ದ ಪ್ರೇಮಿಗಳಿಬ್ಬರ ನಡುವೆ ಉಂಟಾದ ಸಣ್ಣ ಮನಸ್ತಾಪದಿಂದ ಯುವಕ ತನ್ನ ಗೆಳತಿಯನ್ನು ಕೊಂದು ಕಾಡಿನಲ್ಲಿ ಬಿಸಾಕಿ (Murder)

[ccc_my_favorite_select_button post_id="109448"]
ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="109301"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]