ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕನ್ನಡಿಗರನ್ನು (Kannadigas) ಕೆಣಕುವ ಘಟನೆ ನಡೆದಿದ್ದು, ಹೋಟೆಲ್ ಒಂದರ ಡಿಸ್ ಪ್ಲೇ ಬೋರ್ಡಿನಲ್ಲಿ ಕನ್ನಡಿಗರನ್ನು ಅವಹೇಳನ ಮಾಡಲಾಗಿದೆ.
GS SUITES ಎಂಬ ಹೋಟೆಲಿನ ಡಿಸ್ ಪ್ಲೇ ಬೋರ್ಡಿನಲ್ಲಿ ಕನ್ನಡಿಗರನ್ನು ಅವಹೇಳನಕಾರಿಯಾಗಿ ನಿಂದಿಸಲಾಗಿದೆ.
ಸ್ಥಳೀಯರು ಇದನ್ನು ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ, ಹೋಟೆಲ್ ಮಾಲಿಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
😡
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 17, 2025
ಇವರ ಮೇಲೆ ಕೇಸ್ ಆಗಲೇಬೇಕು @BlrCityPolice
ಇದು ಬೇಕಂತಲೇ ಮಾಡಿದ್ದಾರೆ.
ಪದೇ ಪದೇ ಕನ್ನಡಿಗರನ್ನು ಕೆಣಕೋ ಕೆಲಸ ಆಗ್ತಿದೆ ಈ ಹಿಂದಿವಾಲಾಗಳಿಂದ
ಈ ಬಾರಿ ಕನ್ನಡಿಗರನ್ನ ಬಹಳ ಕೆಟ್ಟದ್ದಾಗಿ ನಿಂದಿಸಿದ್ದಾರೆ.
ವಿಡಿಯೋ ರೆಕಾರ್ಡ್ ಆಗಿರೋದು :
ಏಪ್ರಿಲ್ 16, ಶುಕ್ರವಾರ ರಾತ್ರಿ
ಸ್ಥಳ :Hotel GS SUITES, ಕೋರಮಂಗಲ, ಬೆಂಗಳೂರು. pic.twitter.com/FgxDstz1gg
ಇದು ಡಿಸ್ ಪ್ಲೇ ಬೋರ್ಡ್ ಮಾಡಿರುವವರ ಅಥವಾ ಹೋಟೆಲ್ ಕೆಲಸಗಾರರ ದುಷ್ಕೃತ್ಯವಿರಬಹುದೆಂದು ಶಂಕಿಸಲಾಗಿದೆ.
ಮಡಿವಾಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಹೋಟೆಲ್ ವ್ಯವಸ್ಥಾಪಕನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಬೋರ್ಡ್ ಅನ್ನು ತೆರವುಗೊಳಿಸಿದ್ದಾರೆ.
ಹೋಟೆಲ್ ಮಾಲಿಕ ಕನ್ನಡದವನಲ್ಲ. ಅವನು ಇದನ್ನು ಉದ್ದೇಶಪೂರ್ವಕವಾಗಿ ಮಾಡಿರಲು ಸಾಧ್ಯವಿಲ್ಲ. ಆದರೂ ಆತನ ಸ್ಪಷ್ಟಿಕರಣ ಬಯಸಿ ವಿಚಾರಣೆ ನಡೆಸಲಾಗಿದೆ.
ಒಂದು ವೇಳೆ ನಿರ್ಲಕ್ಷ್ಯ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.