ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆರ್‌ಸಿಬಿ (RCB) ಹಾಗೂ ಕೆಕೆಆರ್ (KKR) ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ (Virat Kohli) ಅವರನ್ನು ಅಪ್ಪಿಕೊಳ್ಳುವೆ ಎಂದು ಸವಾಲ್ ಎಸೆದಿದ್ದ RCB ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರ್‌ಸಿಬಿ ಅಭಿಮಾನಿಯೋರ್ವ ಗೆಳೆಯನೊಂದಿಗೆ ಸೇರಿ ಕಬ್ಜಾ ಶರಣ್ (Kabza Sharan) ಹೆಸರಿನ ಇನ್ಸ್ಟಾಗ್ರಾಮ್‌ನಲ್ಲಿ ಕ್ರೀಡಾಂಗಣದಲ್ಲಿ ಓಡಿ ಹೋಗಿ ಕೊಹ್ಲಿಯವರನ್ನು ಹಗ್ ಮಾಡುವೆ ಎಂದು ಸಾವಲು ಹಾಕಿದ್ದ.
ಕೂಡಲೇ ಎಚ್ಚೆತ್ತುಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಆತ ಮತ್ತು ಆತನ ಗೆಳೆಯನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ.
ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಎಚ್ಚರ!
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) May 17, 2025
ಐಪಿಎಲ್ ಪಂದ್ಯದ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗುವುದು ಪವರ್ ಪ್ಲೇ ಆಟವಲ್ಲ. ಹೀಗೆ ಮಾಡಿದರೆ ನೀವು ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ! ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್ ಗಳು ಎತ್ತಿದ ಕೈ!
Bold move, champ! But storming past… pic.twitter.com/zOd5T6uHit
ಆ ಮೂಲಕ ಸ್ಟೇಡಿಯಂ ನುಗ್ತೀನಿ, ವಿರಾಟ್ ಕೊಹ್ಲಿಯವರನ್ನು ಹಗ್ ಮಾಡ್ತೀನಿ ಎಂದು ಸವಾಲ್ ಎಸೆದು ಹುಚ್ಚಾಟ ಮೇರೆದಿದ್ದ ಇಬ್ಬರಿಗೆ ಇಂದಿನ RCB Vs KKR ಪಂದ್ಯವನ್ನು ನೋಡುವ ಭಾಗ್ಯವೂ ಇಲ್ಲದಂತಾಗಿದೆ.