ಬರೇಲಿ; ಕುಡಿದ ಅಮಲಿನಲ್ಲಿ ಪತಿರಾಯನೋರ್ವ ತನ್ನ ಮಡದಿಯನ್ನು ಚಾವಣಿಯ ಮೇಲಿಂದ ತಲೆಕೆಳಗೆ ಮಾಡಿ ನೇತು ಹಾಕಿರುವ ವಿಕೃತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ( Video Viral) ಆಗಿದೆ.
ಉತ್ತರ ಪ್ರದೇಶದ ಬರೇಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಕುರಿತಂತೆ ಸಂತ್ರಸ್ತೆಯ ಸಹೋದರ ಆಕೆಯ ಪತಿ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಡುಕ ಗಂಡ ತನ್ನ ಹೆಂಡತಿಯನ್ನು ಕ್ರೂರವಾಗಿ ಹೊಡೆದು, ನಂತರ ಅವಳನ್ನು ಚಾವಣಿಯಿಂದ ತಲೆಕೆಳಗಾಗಿ ನೇತುಹಾಕಿದ್ದಾನೆ.
यह युवक अपनी पत्नी को छत से उल्टा लटकाकर पीट रहा है. पत्नी चीख रही है, चिल्ला रही है लेकिन इस जल्लाद पर कोई असर नहीं पड़ रहा है.
— Priya singh (@priyarajputlive) May 16, 2025
पड़ोसी बीच बचाव करने में लगे हुए हैं. पुलिस इस जल्लाद को कायदे से सबक सिखाए। घटना यूपी के बरेली की है. pic.twitter.com/4FHARGmwV2
ಈ ವೇಳೆ ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ರಕ್ಷಿಸಿದ್ದಾರೆ.
ಇನ್ನೂ ಆರೋಪಿ ತನ್ನ ಹೆಂಡತಿಯನ್ನು ಅದೇ ನೇತಾಡುವ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಪತಿಯ ಅಮಾನವೀಯ ಹೊಡೆತದಿಂದಾಗಿ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಆರೋಪಿಗಳು ಪರಾರಿಯಾಗಿದ್ದಾರೆಂದು ವರದಿಯಾಗಿದೆ.