ತಿರುಮಲ: ಭಾರತದ ಕ್ರಿಕೆಟ್ ತಂಡದ ತರಬೇತುದಾರ ಗೌತಮ್ ಗಂಭೀರ್ (Gautam Gambhir) ಅವರು ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ವಿಶೇಷ ವಿಮಾನದಲ್ಲಿ ಭಾನುವಾರ ಬೆಳಗ್ಗೆ ಬಂದಿಳಿದ ಅವರು, ತಮ್ಮ ಕುಟುಂಬದೊಂದಿದಿಗೆ ವೆಂಕಟೇಶ್ವರನ ದರ್ಶನ ಪಡೆದರು.
ದೇಗುಲದಲ್ಲಿ ಗೌತಮ್ ಗಂಭೀರ್ ಅವರನ್ನು ಕಂಡು ಹಲವು ಮಂದಿ ಭಕ್ತಾದಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಚಕಿತರಾದರು.
WATCH | भारतीय पुरुष क्रिकेट टीम के हेड कोच गौतम गंभीर ने परिवार के साथ तिरुमाला वेंकटेश्वर मंदिर में पूजा-अर्चना की@GautamGambhir #TirupatiMandir #TirupatiBalaji #GautamGambhir #TeamIndia pic.twitter.com/WC0FA39pQy
— Times Now Navbharat (@TNNavbharat) May 18, 2025
ಈ ವೇಳೆ ಕೆಲವರು ಮಾತನಾಡಿಸಲು ಯತ್ನಿಸದಿದರೂ ಸಹ ಗೌತಮ್ ಗಂಭೀರ್ ಮೌನವಾಗಿದ್ದರು. ಮಾಧ್ಯಮದ ಪ್ರಶ್ನೆಗಳಿಗೂ ಸಹ ಪ್ರತಿಕ್ರಿಯಿಸದೇ ತೆರಳಿದ ಗಂಭೀರ್ ದೇವರ ದರ್ಶನ ಪಡೆದರು.