ವಿಜಯನಗರ: ಕಾರು ಲಾಕ್ (Car lock) ಆದ ಪರಿಣಾಮ ನಾಲ್ವರು ಮಕ್ಕಳು ಉಸಿರುಗಟ್ಟಿ (Suffocation) ಸಾವನಪ್ಪಿರುವ ಘಟನೆ ದ್ವಾರಪುಡಿ ಗ್ರಾಮದಲ್ಲಿ ಸಂಭವಿಸಿದೆ.
ಮಹಿಳಾ ವಾರ್ಡ್ ಕಚೇರಿ ಬಳಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮೋಜಿಗಾಗಿ ನಾಲ್ಕು ಮಕ್ಕಳು ಕುಳಿತ ವೇಳೆ ಕಾರಿನ ಬಾಗಿಲು ಲಾಕ್ ಆಗಿದೆ.
ಪರಿಣಾಮವಾಗಿ ಮಂಗಿ ಬುಚ್ಚಿಬಾಬು ಮತ್ತು ಭವಾನಿ ದಂಪತಿಗಳ ಪುತ್ರ ಉದಯ್ (8 ವರ್ಷ), ಬುರ್ಲು ಆನಂದ್ ಮತ್ತು ಉಮಾ ದಂಪತಿಗಳ ಇಬ್ಬರು ಪುತ್ರಿಯರು, ಚಾರುಮತಿ (8 ವರ್ಷ) ಮತ್ತು ಚರಿಷ್ಮಾ (6 ವರ್ಷ), ಮತ್ತು ಕಂಡಿ ಸುರೇಶ್ ಮತ್ತು ಅರುಣಾ ದಂಪತಿಗಳ ಪುತ್ರಿ ಮನಸ್ವಿನಿ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದರೆಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)