ದೊಡ್ಡಬಳ್ಳಾಪುರ: ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಮೋರಿಯ ತಡೆಗೋಡೆಗೆ ಡಿಕ್ಕಿ (Accident) ಹೊಡೆದು, ಮೋರಿಗೆ ಬಿದ್ದ ಪರಿಣಾಮ, ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ಸೊಣಮಾರನಹಳ್ಳಿ ಮತ್ತು ದಂಡುದಾಸನ ಕೊಡಿಗೇಹಳ್ಳಿ ಮಾರ್ಗಮಧ್ಯೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕೊನಘಟ್ಟ ನಿವಾಸಿ 30 ವರ್ಷದ ಮಣಿಕುಮಾರ ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು, ಯಾರು ನೋಡದೇ ಇದ್ದ ಪರಿಣಾಮ ಗಾಯಗೊಂಡ ಮಣಿಕುಮಾರ್, ನೋವಿನಿಂದ ಒದ್ದಾಡಿ ಒದ್ದಾಡಿ ಉಸಿರು ಚೆಲ್ಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.