ದೊಡ್ಡಬಳ್ಳಾಪುರ: 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM), ಸಮಗ್ರ ತೋಟಗಾರಿಕೆ (Horticulture) ಅಧಿವೃದ್ದಿ (CHD) ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ವತಿಯಿಂದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (PMKSY-PDMC) ಹನಿ ನೀರಾವರಿ ಘಟಕಗಳನ್ನು ನಿರ್ಮಿಸಿಕೊಳ್ಳಬಹುದು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ (NHM) ಹಾಗೂ ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯಡಿ (CHD) ರೈತರು ದ್ರಾಕ್ಷಿ, ಮಾವು, ಹಲಸು, ಪಪ್ಪಾಯ, ದಾಳಿಂಬೆ, ಸೀಬೆ, ಡ್ರ್ಯಾಗನ್ ಪ್ರೊಟ್, ಬೆಣ್ಣೆ ಹಣ್ಣು, ಹೈಬ್ರಿಡ್ ತರಕಾರಿ ಹಾಗೂ ಹೂವಿನ ಬೆಳೆಗಳಾದ ಬಲ್ಬಸ್ ಪುಷ್ಪಗಳು, ಟ್ಯೂಬ್ರೋಸ್, ಧವನ, ಮಲ್ಲಿಗೆ ಹೂವುಗಳನ್ನು ಬೆಳೆಯಬಹುದು.
ಹಾಗೇ ರೋಗ ಮತ್ತು ಕೀಟ ನಿಯಂತ್ರಣ, ಪ್ಲಾಸ್ಟಿಕ್ ಹೊದಿಕೆ, ಪ್ಲಾಸ್ಟಿಕ್ ಟನೆಲ್ಸ್, ಸೆನ್ಸರ್ ಆಧಾರಿತ ಮಷಿನ್ ಗಳು, ಪ್ರಾಥಮಿಕ ಸಂಸ್ಕರಣ ಘಟಕಗಳು, ಪಾಲಿ ಮನೆ, ಪಕ್ಷಿ ನಿರೋಧಕ ಬಲೆಗಳು, ಜೇನುಸಾಕಾಣಿಕೆ, ಘಟಕಗಳನ್ನು ನಿರ್ಮಿಸಿಕೊಳ್ಳಲು ಹಾಗೂ ಕೃಷಿಗೆ ಸಂಬಂಧಪಟ್ಟ ಯಂತ್ರೋಪಕರಣಗಳ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವನ್ನು ಪಡೆಯಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಮೇ. 31ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು, ಹಾಗೂ ಹೋಬಳಿ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.
ಸಂಪರ್ಕ ಸಂಖ್ಯೆ
ಸಹಾಯಕ ತೋಟಗಾರಿಕೆ ಅಧಿಕಾರಿ, ಕಸಬಾ ಹೋಬಳಿ (ಮೊ) 9964828711.
ಸಹಾಯಕ ತೋಟಗಾರಿಕೆ ಅಧಿಕಾರಿ ಸಾಸಲು ಹೋಬಳಿ (ಮೊ) 7829030725.
ಸಹಾಯಕ ತೋಟಗಾರಿಕೆ ಅಧಿಕಾರಿ, ಮಧುರೆ ಹೋಬಳಿ (ಮೊ) 9538537491.
ಸಹಾಯಕ ತೋಟಗಾರಿಕೆ ಅಧಿಕಾರಿ, ದೊಡ್ಡಬೆಳವಂಗಲ ಹೋಬಳಿ (ಮೊ) 9964828711.
ಸಹಾಯಕ ತೋಟಗಾರಿಕೆ ಅಧಿಕಾರಿ, ತೂಬಗೆರೆ ಹೋಬಳಿ (ಮೊ) 8317483470.
ಸಹಾಯಕ ತೋಟಗಾರಿಕೆ ನಿರ್ದೇಶಕರು, (ತಾಂತ್ರಿಕ ಸಹಾಯಕರು), ಜಿಪಂ, ದೊಡ್ಡಬಳ್ಳಾಪುರ (ಮೊ) 9535412975.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಪಂ, ದೊಡ್ಡಬಳ್ಳಾಪುರ (ಮೊ) 9482129648.