ದೊಡ್ಡಬಳ್ಳಾಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಿಂದ ಇಲ್ಲಿಯವರೆಗೂ ವಾಡಿಕೆ ಮಳೆ (Rainfall) 134 ಮಿಮೀ ಇದ್ದು, ಮೇ.23ರವರೆಗೆ ಸುಮಾರು 223.78 ಮಿಮೀ ವಾಡಿಕೆ ಮೀರಿದ ಮಳೆಯಾಗಿರುತ್ತದೆ.
ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಉತ್ತಮ ಮಳೆಯಾದ ಹಿನ್ನಲೆ ರೈತರು ಬಿತ್ತನೆಗೆ ಭೂಮಿ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿದೆ.
ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದರಗಳಲ್ಲಿ ಈಗಾಗಲೇ ರಾಗಿ, ಮುಸುಕಿನ ಜೋಳ, ಅಲಸಂದೆ, ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿರುತ್ತದೆ.
ರೈತರು ಮೇ ತಿಂಗಳ ಕೊನೆ ವಾರದಲ್ಲಿ ತೊಗರಿ ಮತ್ತು ನೆಲಗಡಲೆಯನ್ನು ಬಿತ್ತನೆ ಮಾಡಲು ಸೂಕ್ತ ಸಮಯವಾಗಿರುವುದರಿಂದ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಆಧಾರ್ ಸಂಖ್ಯೆ / ಈIಆ ಸಂಖ್ಯೆಯನ್ನು ನೀಡಿ, ಸರ್ಕಾರದ ಸಹಾಯಧನದಡಿ ರೀಯಾಯಿತಿ ದರದಲ್ಲಿ ಪಡೆಯಬಹದೆಂದು ಸಹಾಯಕ ಕೃಷಿ ನಿರ್ದೇಶಕ ಡಾ.ಪಿರಾಘವೇಂದ್ರ ತಿಳಿಸಿರುತ್ತಾರೆ.