ಲಕ್ನೋ: ಬೌಲಿಂಗ್ ಸಂದರ್ಭದಲ್ಲಿ ಆತಂಕ ಎದುರಾದರೂ, ಬ್ಯಾಟಿಂಗ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ಜಿತೇಶ್ ಶರ್ಮಾ (Jitesh sharma) ಆರ್ಭಟಿಸಿದ ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.
ಈ ಮೂಲಕ 18ನೇ ಆವೃತ್ತಿಯ ಲೀಗ್ ಪಂದ್ಯಗಳನ್ನು ಮುಗಿಸಿದ್ದು, ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟಿದೆ.
ಟಾಸ್ ಗೆದ್ದ RCB ಮೊದಲು ಬ್ಯಾಟಿಂಗ್ ಲಕ್ನೋ ತಂಡಕ್ಕೆ ಅವಕಾಶ ನೀಡಿತು. ಅದೇನ್ ಕರ್ಮಾನೋ ಏನೋ ಎಲ್ಲಾ ಕಡೆ ವಿಫಲವಾದವರಿಗೆ RCB ಪುನರ್ಜನ್ಮ ನೀಡುತ್ತೆ ಎಂಬ ಮಾತಿನಿಂತೆ, ಈ ಸರಣಿಯ ಉದ್ದಕ್ಕೂ ಸಿಕ್ ಸಿಕ್ಕಾಗೆ ವಿಕೆಟ್ ಚೆಲ್ಲುತ್ತಿದ್ದ ಪಂತ್, ಇಂದಿನ ಪಂದ್ಯದಲ್ಲಿ ಶತಕದ ಪಲ್ಟಿಯ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು.
ಈ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ (RCB) 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಗೆದ್ದು ಬೀಗಿದೆ.
ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್ ಮಾಡಿದ ದಾಖಲೆಯನ್ನೂ RCB ಬರೆದಿದೆ.
ಚೇಸಿಂಗ್ ಆರಂಭಿಸಿದ ಆರ್‌ಸಿಬಿ ಬಿರುಸಿನ ಆಟಕ್ಕೆ ಮುಂದಾಯಿತು. ಮೊದಲ ವಿಕೆಟಿಗೆ ವಿರಾಟ್ ಕೊಹ್ಲಿ (Virat Kohli), ಸಾಲ್ಟ್ ಜೋಡಿ 34 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತ್ತು.
ಆದರೆ ರಜತ್ ಪಾಟೀದಾರ್, ಲಿಯಾಮ್ ಲಿವಿಂಗ್‌ಸ್ಟೋನ್ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿದ ಪರಿಣಾಮ ಮತ್ತೆ ಆರ್‌ಸಿಬಿಗೆ ಗೆಲುವು ಅತಂಕ ಸೃಷ್ಟಿಸಿತ್ತು.
ಭರ್ಜರಿ ಅಟ
ಬಳಿಕ ಜಿತೇಶ್ ಶರ್ಮಾ – ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು.
ಜಿತೇಶ್ ಶರ್ಮಾ 33 ಎಸೆತಗಳಲ್ಲಿ 85 ರನ್ (6 ಸಿಕ್ಸರ್, 8 ಬೌಂಡರಿ) ಚಚ್ಚಿದ್ರೆ, ವಿರಾಟ್ ಕೊಹ್ಲಿ 54 ರನ್ (30 ಎಸೆತ, 10 ಬೌಂಡರಿ), ಮಯಾಂಕ್ ಅಗರ್ವಾಲ್ 41 ರನ್ (23 ಎಸೆತ, 5 ಬೌಂಡರಿ) ಫಿಲ್ ಸಾಲ್ಟ್ 30 ರನ್ (19 ಎಸೆತ, 6 ಬೌಂಡರಿ), ರಜತ್ ಪಾಟೀದಾರ್ 14 ರನ್ ಗಳಿಸಿದರು.