ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ (IPL) ಪಂದ್ಯಾವಳಿಯ ಹೈವೋಲ್ವೇಜ್ ಫೈನಲ್ RCB vs Punjab kings ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.
ಇದೀಗ ಫೈನಲ್ ಪಂದ್ಯದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, ಅದೆಷ್ಟೋ ವರ್ಷಗಳ ಕಾಯುವಿಕೆಯ ಬಳಿಕ ಆರ್ ಸಿಬಿ ತಂಡವು ಫೈನಲ್ ಪ್ರವೇಶಿಸಿದೆ. ಇದಕ್ಕಿಂತ ಉತ್ತಮ ವಿಷಯ ಬೇರೊಂದಿಲ್ಲ ಆರ್‌ಸಿಬಿಯ ಸಾಧನೆಯ ಶಿಖರಕ್ಕೆ ಇನ್ನೊಂದೆ ಹೆಜ್ಜೆ ಬಾಕಿ ಇದೆ ಎಂದರು.
ಇಡೀ ಟೂರ್ನಿಯುದ್ದಕ್ಕೂ ಬಹಳ ಉತ್ತಮವಾಗಿ ಕಾಣಿಸಿಕೊಂಡಿರುವ ಆರ್ ಸಿಬಿಯು ಇನ್ನೊಂದೇ ಒಂದು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದರೆ 17 ವರ್ಷಗಳ ವನವಾಸಕ್ಕೆ ಬ್ರೇಕ್ ಬಿದ್ದಂತೆ ಆಗುತ್ತದೆ. ಅದೇನೇ ಆಗಲಿ ಈ ಬಾರಿ ಆರ್‌ಸಿಬಿ ಗೆಲ್ಲಲೇಬೇಕು, ಕಪ್ ಬೆಂಗಳೂರಿಗೆ ತರಲೇಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆರ್‌ಸಿಬಿ ಯೊಂದಿಗೆ ಇಡೀ ಅಭಿಮಾನಿ ಬಳಗ ಮಾತ್ರವಲ್ಲ, ಕರ್ನಾಟಕದ ಜನತೆ, ಕರ್ನಾಟಕ ಸರ್ಕಾರ ಕೂಡ ನಿಮ್ಮೊಂದಿಗೆ ಇದೆ, ನಿಮ್ಮ ಒಂದು ಹೆಜ್ಜೆಗೆ ಇಡೀ ಕರ್ನಾಟಕ ಮಾತ್ರವಲ್ಲ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ.
ನನಗೆ ಸಂಪೂರ್ಣ ನಂಬಿಕೆ ಇದೆ. ದೇವರಿದ್ದಾನೆ ಒಳ್ಳೇದೇ ಆಗುತ್ತೆ ಎಂದು ಡಿಕೆ ಶಿವಕುಮಾರ್ ಶುಭಹಾರೈಸಿದ್ದಾರೆ.