ವಾರಂಗಲ್: ಓಡಿ ಹೋಗಿ ಪ್ರೇಮ ವಿವಾಹವಾದ ಜೋಡಿಯ (Lovers) ಮೇಲೆ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ನುಗ್ಗಿ, ಹೊರಗೆಳೆದುಕೊಂಡು ಬಂದು ಸಿನಿಮಾ ಶೈಲಿಯಲ್ಲಿ ಹಲ್ಲೆ ನಡೆಸಿರುವ ಘಟನೆ ತೆಲಂಗಾಣ ರಾಜ್ಯ ನಲ್ಲಬೆಳ್ಳಿಯಲ್ಲಿ ನಡೆದಿದೆ.
ಪೋಷಕರ ವಿರೋಧದ ಕಾರಣ ಓಡಿ ಹೋಗಿದ್ದ ಈ ಜೋಡಿ, ಒಂದು ವಾರದ ಹಿಂದೆ ವಿವಾಹವಾಗಿದ್ದರು ಮತ್ತು ಶನಿಗಾರಂನ ಬಾಲರಾಜು ಎಂಬ ವ್ಯಕ್ತಿಯ ಮನೆಯಲ್ಲಿ ಅಡಗಿಕೊಂಡಿದ್ದರು ಎನ್ನಲಾಗಿದೆ.
ಆದರೆ, ಬಾಲರಾಜು ಮನೆಯಲ್ಲಿ ಇಲ್ಲದಿದ್ದಾಗ, ಯುವತಿಯ ಸಂಬಂಧಿಕರು ಬಂದು ಜಗಳವಾಡಿದರು, ಮತ್ತು ಸ್ಥಳೀಯರು ಅವರನ್ನು ತಡೆದರಂತೆ
ಈ ಕುರಿತಂತೆ ರಕ್ಷಣೆ ಕೋರಿ ನವ ದಂಪತಿಗಳು ಪೊಲೀಸ್ ಠಾಣೆಗೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ವಿಷಯ ತಿಳಿದುಕೊಂಡು ಹುಡುಗಿಯ ಸಂಬಂಧಿಕರು ಠಾಣೆಗೆ ಬಂದು ಪೊಲೀಸರ ಮುಂದೆಯೇ ಜೋಡಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಯುವಕನ ರಕ್ಷಿಸಲು ಬಹಳಷ್ಟು ಪ್ರಯಾಸ ಪಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿದೆ.