Astrology: ಬುಧವಾರ, ಜೂ. 11, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಉತ್ತಮ ದಿನವಾಗಿರುವುದಿಲ್ಲ. ಏಕೆಂದರೆ ಸಂಘರ್ಷದ ಪರಿಸ್ಥಿತಿ ಯನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ, ಖಂಡಿತವಾಗಿಯೂ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ, ಆದ್ದರಿಂದ ಧೈರ್ಯವನ್ನು ಕಳೆದುಕೊಳ್ಳಬೇಡಿ.
ವೃಷಭ ರಾಶಿ: ಇಡೀ ದಿನ ಫ್ರೆಶ್ ಆಗಿರುತ್ತೀರಿ. ಉದ್ಯೋಗ ದಲ್ಲಿ ಯಶಸ್ಸು ಕಾಣುವಿರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಬಹಳ ಒಳ್ಳೆಯ ದಿನ. ಮಾಡುವ ಯಾವುದೇ ಕೆಲಸದಲ್ಲಿ ದೈವಿಕ ಸಹಾಯವನ್ನು ಪಡೆಯುತ್ತೀರಿ.
ಮಿಥುನ ರಾಶಿ: ಉತ್ಸಾಹದಿಂದ ತುಂಬಿರುವಿರಿ. ಅದೃಷ್ಟ ನಿಮ್ಮೊಂದಿಗಿದೆ. ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕೆಲಸದಲ್ಲಿ ಉತ್ಸಾಹವಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾ ಕ್ಷೇತ್ರದಲ್ಲಿ ಯಶಸ್ಸು ಕಾಣುವರು.
ಕಟಕ ರಾಶಿ: ಸಂಗಾತಿಯಿಂದ ಮತ್ತು ಮಕ್ಕಳಿಂದ ಆಹ್ಲಾದಕರ ಸುದ್ದಿಯನ್ನು ಪಡೆಯುತ್ತೀರಿ. ಕುಟುಂಬದಲ್ಲಿ ನಡೆಯುತ್ತಿರುವ ಶುಭ ಕಾರ್ಯಗಳಿಂದ ಆನಂದಿಸುವಿರಿ.
ಸಿಂಹ ರಾಶಿ: ಕೌಟುಂಬಿಕ ಜೀವನ ಏರಿಳಿತಗಳಿಂದ ಕೂಡಿರುತ್ತದೆ. ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯು ಜೀವನವನ್ನು ಸಂತೋಷಪಡಿಸಲು ಸಹಾಯ ಮಾಡುತ್ತದೆ.ಅಲ್ಲದೆ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಭಯ ಉಳಿಯುತ್ತದೆ.
ಕನ್ಯಾ ರಾಶಿ: ಧೈರ್ಯ ಮತ್ತು ಆತ್ಮವಿಶ್ವಾಸದ ಹೆಚ್ಚಳವನ್ನು ನೋಡುತ್ತೀರಿ. ಇದರ ಪರಿಣಾಮವಾಗಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ.
ತುಲಾ ರಾಶಿ: ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲವು ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಾತು ಮಧುರವಾಗಿರುತ್ತದೆ, ಇದರಿಂದಾಗಿ ಇತರರನ್ನು ಕಡೆಗೆ ಆಕರ್ಷಿಸುತ್ತೀರಿ.
ವೃಶ್ಚಿಕ ರಾಶಿ: ಕೆಲಸದಲ್ಲಿ ಕಾರ್ಯಕ್ಷಮತೆ ಉತ್ತಮ ವಾಗಿರಲಿದೆ. ಮಾತನಾಡುವ ಕಲೆಯನ್ನು ಹೊಂದಿದ್ದೀರಿ, ಅದು ನಿಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ.
ಧನಸ್ಸು ರಾಶಿ: ಕೆಲಸ ಮತ್ತು ಕುಟುಂಬ ಸಂತೋಷಕ್ಕಾಗಿ ಉತ್ತಮವಾಗಿರಲು ಸಂಬಂದಿಕರ ಸಹಕಾರ ದೊಂದಿಗೆ ಇರಲಿದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.
ಮಕರ ರಾಶಿ: ಕೌಟುಂಬಿಕ ಜೀವನ ಏರಿಳಿತಗಳಿಂದ ಕೂಡಿರುತ್ತದೆ. ಕಠಿಣ ಪರಿಶ್ರಮ ಮತ್ತು ತಿಳುವಳಿಕೆ ಯು ಜೀವನವನ್ನು ಸಂತೋಷ ಪಡಿಸಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
ಕುಂಭ ರಾಶಿ: ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ಮತ್ತು ಪ್ರಯಾಣ ಇತ್ಯಾದಿಗಳನ್ನು ಆನಂದಿಸುವಿರಿ. ಕೆಲಸದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ.
ಮೀನ ರಾಶಿ: ನಿಮಗೆ ಸ್ಮರಣೀಯ ದಿನವಾಗಿರುವ ಸಾಧ್ಯತೆ. ಮಧುರವಾದ ಮಾತಿನ ಸಹಾಯದಿಂದ ಮತ್ತು ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ದಿನವು ಉತ್ತಮವಾಗಿ ಪ್ರಾರಂಭವಾಗಲಿದೆ.
ರಾಹುಕಾಲ: 12:37 ರಿಂದ 02:04
ಗುಳಿಕಕಾಲ: 11:10 ರಿಂದ 12:37
ಯಮಗಂಡಕಾಲ: 08:16 ರಿಂದ 09:43