ದೊಡ್ಡಬಳ್ಳಾಪುರ: ಆಟವಾಡುವ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ( farm pond) ಬಿದ್ದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊನಘಟ್ಟ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ
ಮೃತ ಬಾಲಕನನ್ಮು ಆಂಧ್ರ ಪ್ರದೇಶ ಮೂಲದ 8 ವರ್ಷದ ನಾಗಚೈತನ್ಯ ಎಂದು ಗುರುತಿಸಲಾಗಿದೆ.
ಗಾರೆ ಕೆಲಸದವರಾದ ಆಂಧ್ರಪ್ರದೇಶ ಮೂಲದ ಭಾಗ್ಯಮ್ಮ – ನರಸಿಂಹ ದಂಪತಿಗಳು ಮಕ್ಕಳ ಸಮೇತ ಕೊನಘಟ್ಟಕ್ಕೆ ಬಂದಿದ್ದರು ಎನ್ನಲಾಗಿದೆ.
ಇಂದು ನಿರ್ಮಾಣ ಹಂತದ ಕಟ್ಟದಲ್ಲಿ ತಂದೆ-ತಾಯಿ ಕೆಲಸ ಮಾಡುವ ವೇಳೆ ಅಣ್ಣ-ತಂಗಿ ಆಟವಾಡುತ್ತಾ ಕೃಷಿ ಹೊಂಡದ ಕಡೆ ತೆರಳಿದ್ದಾರೆ.
ಈ ವೇಳೆ ಆಯಾತಪ್ಪಿ ಅಣ್ಣ ನಾಗಚೈತನ್ಯ ಕೃಷಿ ಹೊಂಡದಲ್ಲಿ ಬಿದ್ದಿದ್ದಾನೆ. ಇದನ್ನು ಕಂಡ ತಂಗಿ ಕೂಡಲೇ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಆದರೆ ಪೋಷಕರು ಬರುವ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೃಷಿ ಹೊಂಡಗಳಿಂದ ಪದೇ ಪದೇ ಉಂಟಾಗುತ್ತಿರುವ ಪ್ರಾಣ ಹಾನಿ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಇಲಾಖೆ ಅಧಿಕಾರಿಗಳು ರೈತರಿಗೆ ಕಟ್ಟುನಿಟ್ಟಿನ ಸೂಚನೆ ನೀಡದ ಕಾರಣ ಈ ರೀತಿ ಅಮಾಯಕರು ಸಾವನಪ್ಪಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.