ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಲವಂತವಾಗಿ ತಬ್ಬಿ, ತುಟಿಗೆ ಮುತ್ತಿಟ್ಟಿರುವ ಮದನ್ ಎಂಬುವವನನ್ನು ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ (Arrested).
ಜೂನ್ 6 ರ ಸಂಜೆ 7 ಗಂಟೆ ಸುಮಾರಿಗೆ ಕಾಕ್ಸ್ ಟೌನ್‌ನ ಮಿಲ್ಸನ್ ಪಾರ್ಕ್ ಬಳಿ ನಡೆದಿದೆ.
ಈತ ಬೆಂಗಳೂರಿನ ಉದ್ಯಾನವನಗಳು, ಸಣ್ಣ ಪಾರ್ಕ್‌ಳು, ಮೈದಾನಗಳು ಮತ್ತು ಮಹಿಳೆಯರು ವಾಯುವಿಹಾರಕ್ಕೆ ತೆರಳುವ ರಸ್ತೆಗಳಲ್ಲಿ ಈ ಕೃತ್ಯ ನಡೆಸುತ್ತಿದ್ದ ಎನ್ನಲಾಗಿದೆ.
ಇನ್ನೊಬ್ಬ ಮಹಿಳೆಯ ಮೇಲೂ ಇದೇ ರೀತಿಯ ಕೃತ್ಯ ಎಸಗಿದ್ದಾನೆ. ಮಹಿಳೆಯರು ಗಲಾಟೆ ಮಾಡಿ, ಆರೋಪಿಯನ್ನು ಪ್ರಶ್ನಿಸಿದಾಗ, ನೀವು ಯಾರಿಗೆ ಹೇಳಿದರೂ ಏನೂ ಆಗಲ್ಲ ಎಂದು ಬೆದರಿಕೆ ಹಾಕಿ, ಕಾರಿನಲ್ಲಿ ಪರಾರಿಯಾಗಿದ್ದಾನೆ.
ಮಹಿಳೆಯರು ತಡರಾತ್ರಿ ಪುಲಕೇಶಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಆರೋಪಿಯ ವಿರುದ್ದ ಪೋಕ್ಸೋ ಕಾಯಿದೆ ಮತ್ತು ಇತರ ಸಂಬಂಧಿತ ಕಾನೂನು ಕಲಂಗಳಡಿ ವಿಚಾರಣೆ ನಡೆಸಲಾಗುತ್ತಿದೆ.
ಈ ಘಟನೆಯಿಂದ ಸ್ಥಳೀಯ ನಿವಾಸಿಗಳು, ಮಕ್ಕಳ ಪೋಷಕರು ಮತ್ತು ಮಹಿಳಾ ಹಕ್ಕು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸ್ ಭದ್ರತೆ, ಸಿಸಿಟಿವಿ ಕಣ್ಣಾವಲು ಮತ್ತು ಕಠಿಣ ಕಾನೂನು ಜಾರಿಯನ್ನು ಒತ್ತಾಯಿಸಿದ್ದಾರೆ.
ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಪ್ರದೇಶದಲ್ಲಿ ಆರೋಪಿಯು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ತನ್ನ ಕಾಮಚೇಷ್ಟೆ ಮೆರೆದಿದ್ದಾನೆ.
ಬೆಳಗ್ಗೆ ಕುಟುಂಬದೊಂದಿಗೆ ವಾಯುವಿಹಾರಕ್ಕೆ ಬಂದಿದ್ದ ಒಬ್ಬ ಮಹಿಳೆಯ ಬಳಿ ಮುಗ್ಧವಾಗಿ ಹೋಗಿ, ಬಲವಂತವಾಗಿ ತಬ್ಬಿಕೊಂಡು ತುಟಿಗೆ ಮುತ್ತಿಟ್ಟಿದ್ದಾನೆ. ಇದೇ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ