ದೊಡ್ಡಬಳ್ಳಾಪುರ: ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿಯ (Missing person) ಶವ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ (Doddabelavangala Police Station) ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತನನ್ನು ಜೋಡಿ ಕಾರೇಪುರ (ತಾಡಿಪಾಳ್ಯ) 35 ವರ್ಷದ ಚಿಕ್ಕಣ್ಣ ಎಂದು ಗುರುತಿಸಲಾಗಿದೆ.
ಇದೇ ತಿಂಗಳ 14 ರಂದು ಮೃತ ಚಿಕ್ಕಣ್ಣ ಬಹಿರ್ದೆಸೆಗೆ ವೇಳೆ ಕೆರೆಯ ಬಳಿ ತೆರಳಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಇಂದು ಕೆರೆಯಲ್ಲಿ ಮೃತ ದೇಹ ಕಂಡು ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ದೊಡ್ಡಬೆಳವಂಗಲ ಠಾಣೆ ಪೊಲೀಸರು ಶವವನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.