ಲಕ್ಕೋ: ದ್ವಿಚಕ್ರ ವಾಹನದಲ್ಲಿ ಸಾಗುವಾಗ ಪ್ರೇಮಿಗಳು ಹುಚ್ಚಾಟ ಮೆರೆದ ಪರಿಣಾಮ ಯುಪಿ ಪೊಲೀಸರು ಭಾರೀ ದಂಡ (Fine) ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ದಾದಲ್ಲಿ ಯುವತಿಯೊಬ್ಬಳು ಚಲಿಸುತ್ತಿರುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಯುವಕನನ್ನು ತಪ್ಪಿಕೊಂಡು ಮುದ್ದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೇಮಿಗಳ ಈ ಹುಚ್ಚಾಟದಿಂದ ವಾಹನ ಸವಾರರಿಗೆ ಮುಜುಗರ ಹಾಗೂ ತೊಂದರೆಯಾಗಿದೆ ಎಂದು ಆರೋಪಿಸಿ ಸಾರ್ವಜನಿಕವಾಗಿ ಈ ರೀತಿ ವರ್ತಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅನೇಕರು ನೋಯ್ದಾ ಸಂಚಾರಿ ಪೊಲೀಸರಿಗೆ ಆಗ್ರಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೋಯ್ಡಾಸಂಚಾರಿ ಪೊಲೀಸರು, ‘ದೂರನ್ನು ಗಮನದಲ್ಲಿಟ್ಟುಕೊಂಡು, ಕಾನೂನಿನ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನಕ್ಕೆ ರೂ.53,500 ದಂಡ ವಿಧಿಸಲಾಗಿದೆ’ ಎಂದು ವರದಿಯಾಗಿದೆ.