ದೊಡ್ಡಬಳ್ಳಾಪುರ; ಪ್ರವಾಸಕ್ಕೆ ಬಂದಿದ್ದ ಜೋಡಿಯನ್ನು (Couple)ಅಡ್ಡಗಟ್ಟಿ ಹಣ, ಒಡವೆ ದೋಚಿದ್ದ ಮೂವರು ಕಳ್ಳರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಬಂಧಿತರನ್ನು ದೊಡ್ಡಬಳ್ಳಾಪುರದ ತ್ಯಾಗರಾಜ ನಗರದ ನಿವಾಸಿ ದುರ್ಗಾಪ್ರಸಾದ್ (22 ವರ್ಷ), ರೋಜಿಪುರದ ನಿವಾಸಿ ಪ್ರೇಮ್ ಕುಮಾರ್ (24 ವರ್ಷ), ಅಣಗಲಪುರ ನಿವಾಸಿ ಅರುಣ್ (26 ವರ್ಷ) ಎಂದು ಗುರುತಿಸಲಾಗಿದೆ.
ಇವರು ನಂದಿಬೆಟ್ಟಕ್ಕೆ ಪ್ರವಾಸಕ್ಕೆ ಬೈಕ್‌ನಲ್ಲಿ ಬಂದಿದ್ದ ಬೆಂಗಳೂರು ಮೂಲದ ಜೋಡಿಯನ್ನು ಕಣಿವೆಪುರದ ಬಳಿ ಅಡ್ಡಗಟ್ಟಿ, ಒಂದು ಚೈನ್ ದೋಚಿದಲ್ಲದೆ, ಫೋನ್ ಪೇ ಮೂಲಕ 25 ಸಾವಿರ ಹಣವನ್ನು ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದರು.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಬೆನ್ನತ್ತಿದ ಸಾಧಿಕ್ ಪಾಷಾ ನೇತೃತ್ವದ ಪೊಲೀಸರು ಕೇವಲ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅರ್ಜುನ್ ಲಮಾಣಿ, ಸಚಿನ್, ಸುನಿಲ್ ಬಾಸಗಿ, ಹರೀಶ್, ಪ್ರವೀಣ್ ಭಾಗವಹಿಸಿದ್ದರು.