ಬೆಂಗಳೂರು: ಪ್ರವಾಸಿಗರ ಅನುಕೂಲಕ್ಕಾಗಿ ಆರಂಭಿಸಲಾಗಿದ್ದ ದಿವ್ಯ ದರ್ಶನ ಟೂರ್ ಪ್ರಾಕೇಜ್ ಮಾದರಿಯಲ್ಲಿ ಘಾಟಿ ಈಶಾ ಫೌಂಡೇಷನ್ (Ghati Isha Foundation) ಹೆಸರಿನಡಿ ವಾರಾಂತ್ಯದ ದಿನ. ಸರಕಾರಿ ರಜೆಗಳಂದು ಆರಂಭಿಸಲಾದ ನಾನ್ ಏಸಿ ಬಸ್ ಪ್ರವಾಸಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಬೆಂಗಳೂರಿನ ಸುತ್ತಮುತ್ತಲಿನ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿ ಗರ ಅನುಕೂಲಕ್ಕಾಗಿ ಬಿಎಂಟಿಸಿ ಈ ಪ್ರವಾಸಿ ಪ್ಯಾಕೇಜ್ ಘೋಷಿಸಿದ್ದು, ಒಂದು ದಿನದ ಪ್ರವಾಸಿ ಪ್ರಾಕೇಜ್ ನಲ್ಲಿ ಬನಶಂಕರಿಯಿಂದ ನೇರವಾಗಿ ಈಶಾಗೆ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ನೇರವಾಗಿ ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್‌ನ ಆದಿಯೋಗಿ ಶಿವನ ದೇಗುಲಕ್ಕೆ ಕರೆದೊಯ್ಯಲಿವೆ.
ಐಎಂಟಿಸಿ ವೇಗದೂತ ಸೇವೆಗಳು ಹಾಗೂ ಘಾಟಿ ಈಶ ಫೌಂಡೇಷನ್ ಪ್ರಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗದ ಲೋಕಾರ್ಪಣೆಗೆ ಚಾಲನೆ ನೀಡಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತಾವಲಂಬಿತರಿಗೆ 1.5 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್‌ನ್ನು ವಿತರಿಸಿದ್ದೇವೆ. ಬಿಎಂಟಿಸಿ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಅನುಕೂಲಕ್ಕೆ ಪ್ರವಾಸಿ ಸ್ಥಳಗಳಿಗೆ ಟೂರ್ ಪ್ಯಾಕೇಜ್ ಘೋಷಿಸಿದೆ ಎಂದರು.
ಟೂರ್ ಪ್ಯಾಕೇಜ್ ದರ, ಸಮಯ ನಿಲ್ದಾಣಗಳು
ಈಶಾ ಫೌಂಡೇಶನ್‌ಗೆ ಜೂನ್ 21ರಿಂದ ಹೆಚ್ಚುವರಿ ಬಸ್ ಸೇವೆ ಲಭ್ಯವಾಗಲಿದ್ದು, ಇದರಲ್ಲಿ ಕೆಲವು ಧಾರ್ಮಿಕ ಸ್ಥಳಗಳು ಒಳಗೊಂಡಿದೆ. ಕೆಂಪೇಗೌಡ ಮೆಜೆಸ್ಟಿಕ್ ನಿಂದ ಬಸ್ ಬೆಳಗ್ಗೆ 09ಕ್ಕೆ ಸಂಚಾರ ಆರಂಭವಾಗುತ್ತದೆ. ಅಲ್ಲಿಂದ ದೊಡ್ಡಬಳ್ಳಾಪುರದ ಶ್ರೀ ನೇದಾಲಂಜನೇಯ ಸ್ವಾಮಿ ದೇವಸ್ಥಾನ, ನಂತರ ಶ್ರೀಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಜ್ಞಾನತೀರ್ಥ ಲಿಂಗ (ಮುದ್ದೇನಹಳ್ಳಿ), ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಕ್ಷಿ ಮಠ (ಸ್ಕಂದಗಿರಿ), ಅಲ್ಲಿಂದ ಕಲ್ಯಾಣಿ (ಕಾರಂಜಿ) ಮುಂದೆ ಈಶಾ ಫೌಂಡೇಶನ್ ತಲುಪಲಾಗುತ್ತದೆ. ಮರಳಿ ರಾತ್ರಿ 09 ಗಂಟೆಗೆ ಪ್ರವಾಸಿ ಬಸ್ ಮೆಜೆಸ್ಟಿಕ್ ಬಂದು ತಲುಪುತ್ತದೆ.
ಒಬ್ಬ ಪ್ರವಾಸಿಗೆ ಟಿಕೆಟ್ 600 ರುಪಾಯಿ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಮುಂಗಡ ಕಾಯ್ದಿರಿಸಲು ನೀವು www.ksrtc.in ಹಾಗೂ https://bit.ly/4ebRVmr ಅಧಿಕೃತ ಜಾಲ ತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ಆರ್., ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕರು (ಭ&ಜಾ) ಅಬ್ದುಲ್ ಅಹದ್, ಶಿಲ್ಪಾ.ಎಂ (ಮಾ.ತಂ), ಉಪ ಮಹಾಪ್ರಬಂಧಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						