ಮುಂಬೈ: ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಹೃದಯಾಘಾತದಿಂದ ಸಾವನಪ್ಪಿರಬಹುದು ಎಂದು ಶಂಕಿಸಲಾಗಿ. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಶುಕ್ರವಾರ ರಾತ್ರಿ 1 ಗಂಟೆ ವೇಳೆ ಏಕಾಏಕಿ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಶೆಫಾಲಿ ಅವರ ಪತಿ ಅಪಾರ್ಟ್ಮೆಂಟ್ ನಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದೀಗ ಬಂದ ಮಾಹಿತಿ ಅನ್ವಯ ಫೋರೆನ್ಸಿಕ್ ವಿಜ್ಞಾನಿಗಳು ಅಪಾರ್ಟ್ಮೆಂಟ್ಗೆ ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.
ಮೃತ ಶೆಫಾಲಿ ಪುನಿತ್ ರಾಜ್‌ಕುಮಾರ್ ನಟನೆಯ ಕನ್ನಡದ ಹುಡುಗರು ಸಿನಿಮಾದ ಗೀತೆಯೊಂದರಲ್ಲಿ ನರ್ತಿಸಿದ್ದರು.