ಚಂದರ್‌ಕೋಟ್; ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಂಬನ್ ಜಿಲ್ಲೆಯ ಚಂದರ್‌ಕೋಟ್ ಪ್ರದೇಶದ ಲಂಗರ್ ಪಾಯಿಂಟ್‌ನಲ್ಲಿ ನಡೆದಿದೆ.
ಇಂದು(ಜುಲೈ,5) ರಂದು ನಡೆದ ಈ ಘಟನೆಯಲ್ಲಿ ಬಸ್ಸುಗಳಲ್ಲಿದ್ದ ಎಲ್ಲಾ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ.
ಬಸ್ ಬ್ರೇಕ್ ಫೆಲ್ ಆದ ಕಾರಣ ರಂಬನ್ ಜಿಲ್ಲೆಯ ಚಂದರ್‌ಕೋಟ್ ಪ್ರದೇಶದ ಲಂಗರ್ ಪಾಯಿಂಟ್‌ನಲ್ಲಿ ನಿಂತಿದ್ದ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
Five buses heading to #Pahalgam for the Shri #Amarnath Ji Yatra collided near Chanderkote, #Ramban, reportedly due to brake failure. pilgrims injured, shifted to District Hospital Ramban. pic.twitter.com/biGT3ZEBla
— Kashmir Exclusive (@KashmirExclusi1) July 5, 2025
“ಘರ್ಷಣೆಯ ಸಮಯದಲ್ಲಿ, ನಿಂತಿದ್ದ ವಾಹನಗಳ ಹೆಚ್ಚಿನ ಯಾತ್ರಿಕರು ಲಂಗರ್ ಪಾಯಿಂಟ್‌ನೊಳಗೆ ಇದ್ದರು ಮತ್ತು ಯಾರಿಗೂ ದೊಡ್ಡ ಗಾಯಗಳಾಗಿಲ್ಲ” ಎಂದು ವರದಿಯಾಗಿದೆ.