ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಶೆಟ್ಟಿಹಳ್ಳಿ ಬಳಿ ಸುಮಾರು 35-40 ವರ್ಷ ವಯಸ್ಸಿನ ಗಂಡಸಿನ ಅಪರಿಚಿತ ಮೃತ ದೇಹ (Unknown body) ಪತ್ತೆಯಾದ ಪ್ರಕರಣದ ಕುರಿತಂತೆ, ಮೃತನ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತಂತೆ ಪೊಲೀಸರು ಪ್ರಕಟಣೆ ನೀಡಲಾಗಿದ್ದು, ಸುಮಾರು 10-15 ದಿನಗಳ ಹಿಂದೆ ಎರಡು ಗೋಣಿ ಚೀಲ ಹಾಗೂ ಬೆಡ್ ಶೀಟ್‌ನಲ್ಲಿ ಸುತ್ತಿ ಕೊಲೆ ಮಾಡಿರುವ ಶಂಕೆಯಿದ್ದು ಈ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಎತ್ತರ: ಮೃತನು ಸುಮಾರು 30ರಿಂದ 40 ವರ್ಷದ ವಯಸ್ಸಿನವರಾಗಿದ್ದು, 5 ಅಡಿ 4 ಇಂಚು ಎತ್ತರ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ.
ಬಟ್ಟೆ: ನೀಲಿ ಬಣ್ಣ NIKE ನೈಟ್ ಪ್ಯಾಂಟ್ ಧರಿಸಿರುತ್ತಾರೆ.

ಮೃತನ ದೇಹದಲ್ಲಿ ತಾಯತ, ಜನಿವಾರ, ಕೊರಳಲ್ಲಿ ತುಳಸಿ ಮಣಿ ಸರ ಇರುತ್ತದೆ.
ಮೃತನ ಗುರುತು ಸಿಕ್ಕಲ್ಲಿ ದೂರವಾಣಿ ಸಂಖ್ಯೆಗಳಾದ 080-27622025, 9480802453, 080-27622052, 9480802421, ಮತ್ತು 7019532761, 8792219418, 8123279671, 9008316857 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.