ಹೊಸಕೋಟೆ; ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಹಾಲು ಉತ್ಪಾದಕರು, ಮಾರಾಟಗಾರರು, ಹಾಗೂ ಸಿಬ್ಬಂದಿ ವರ್ಗ, ನಿರ್ದೇಶಕರು ಬೆಂಗಳೂರು ಹಾಲು ಒಕ್ಕೂಟದ ಅಮುಲಾಗ್ರ ಬದಲಾವಣೆಗೆ ಸಹಕಾರ ನೀಡಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ (Bamul) ಅಧ್ಯಕ್ಷ ಡಿ.ಕೆ.ಸುರೇಶ್ (D.K.Suresh) ಮನವಿ ಮಾಡಿದರು.
ನಗರದ ಹೊರವಲಯದ ಬಮುಲ್ ಹೊಸಕೋಟೆ ಶಿಥಿಲ ಕೇಂದ್ರದಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘಗಳ ಅಧ್ಯಕ್ಷರ ಸಮಾಲೋಚನಾ ಸಭೆಯಲ್ಲಿ ಮಾತಾನಾಡಿದರು.
ಹೊಸಕೋಟೆ ಚಿಲ್ಲಿಂಗ್ ಸೆಂಟರ್ 2 ಲಕ್ಷ ಲೀಟರ್ ಹಾಲು ಸಂಗ್ರಹಣ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 1.5 ಲಕ್ಷ ಉತ್ಪಾದನೆ ಆಗುತ್ತಿದೆ. ಪ್ರತಿದಿನ ರಾಜ್ಯದಲ್ಲಿ 1.5ಕೋಟಿ ಲೀಟರ್ ಹಾಗೂ ಬಮುಲ್ ನಲ್ಲಿ 18 ಲಕ್ಷ ಲೀ ಹಾಲು ಉತ್ಪಾದನೆ ಆಗುತ್ತಿದೆ. ನಿರೀಕ್ಷೆಗಿಂತ ಉತ್ಪಾದನೆ ಕಡಿಮೆ ಆಗುತ್ತಿರುವ ಪರಿಣಾಮ ಕಳೆದ ಸಾಲಿನಲ್ಲಿ ಬಮುಲ್ ನಲ್ಲಿ ನಷ್ಠ ಆಗಿದೆ.
ಪ್ರಮುಖವಾಗಿ ಕೆಎಂಎಫ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಿಂದೆ ಉಳಿದಿರುವುದು ನಿಚ್ಚಳವಾಗಿದ್ದು ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈಗಾಗಲೇ ಬಮೂಲ್ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಆಡಳಿತ ಮಂಡಳಿಯ ಸದಸ್ಯರ ಜೊತೆ ಸಭೆ ನಡೆಸಿ ಚರ್ಚಿಸಲಾಗಿದ್ದು, ಹಂತ ಹಂತವಾಗಿ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದರು.
ಶಾಸಕ ಶರತ್ ಬಚ್ಚೇಗೌಡ (Sharath Bachegowda) ಮಾತನಾಡಿ, ಹೊಸಕೋಟೆ ಹಾಲು ಶಿತಲೀಕರಣ 23 ಎಕರೆ ಪ್ರದೇಶವನ್ನು ಹೊಂದಿದ್ದು, ಮಾಜಿ ಸಂಸದರಾದ ಬಿ.ಎನ್.ಬಚ್ಚೇಗೌಡರ ದುರದೃಷ್ಟಿಯ ಫಲವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಉತ್ಪದನೆಯಲ್ಲೂ ಹೊಸಕೋಟೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ನಿರಂತರವಾಗಿ ಕಾಯ್ದುಕೊಂಡಿದೆ.
ಮುಂದಿನ ದಿನಗಳಲ್ಲಿ ಹೊಸಕೋಟೆ ತಾಲೂಕಿನಲ್ಲಿ ಫೀಡ್ ಉತ್ಪಾದನಾ ಘಟಕವನ್ನ ಪ್ರಾರಂಭಿಸಲು ನೂತನ ಅಧ್ಯಕ್ಷರು ಮುಂದಾಗಬೇಕು. ತಾಲೂಕಿನಲ್ಲಿ 200 ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಎಲ್ಲಾ ಸಂಘಗಳ ಅಭಿವೃದ್ಧಿಗೆ ರಾಜಕೀಯ ಬದಿಗೊತ್ತಿ ಪಕ್ಷತೀತವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಬಮುಲ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರುಗಳಾದ ಬಿ.ವಿ.ಸತೀಶ್ ಗೌಡ, ಕೆಎಂಎಂ ಮಂಜುನಾಥ್, ಬೈರೇಗೌಡ, ಸತೀಶ್ ಕಡತನಮನೆ, ಚನ್ನಪಟ್ಟಣ ಲಿಂಗೇಶ್, ಆನೇಕಲ್ ರಮೇಶ್, ಎಲ್ ಎನ್ ಟಿ ಮಂಜುನಾಥ, ಎಂಎಲ್ಸಿ ರವಿ, ವವಸ್ಥಾಪಕ ನಿರ್ದೇಶಕ ಡಾ ಸುರೇಶ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಬಿಎಂಆರ್ ಡಿಎ ಅಧ್ಯಕ್ಷ ಕೇಶವಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ಹಾಜರಿದ್ದರು.