ಬೆಂ.ಗ್ರಾಂ.ಜಿಲ್ಲೆ: 2025-26 ನೇ ಸಾಲಿನ ಕೃಷಿ (Krushi) ಹಾಗೂ ಕೃಷಿ ಪಂಡಿತ ಪ್ರಶಸ್ತಿ (Krushi Panditha Award) ಯೋಜನೆಯಡಿ ಆಸಕ್ತ ಪುರುಷ ರೈತರು ಹಾಗೂ ಮಹಿಳಾ ರೈತರಿಗೆ ಪ್ರತ್ಯೇಕ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ (Application Invited).
ಈ ಯೋಜನೆಯಡಿ ರೈತರನ್ನು ಕೃಷಿಯತ್ತ ಆಕರ್ಷಿಸಲು ಹಾಗೂ ಪ್ರೋತ್ಸಾಹಿಸುವ ಸಲುವಾಗಿ ಆಸಕ್ತ ರೈತರಿಂದ ಬೆಳೆ ಸ್ಪರ್ಧೆಗೆ ಅನ್ ಲೈನ್ ಮೂಲಕ ಅಧಿಕೃತ ಜಾಲತಾಣವಾದ ಕಿಸಾನ್ ಪೋರ್ಟಲ್ ನಲ್ಲಿ RSK ಲಾಗಿನ್ ಅಥವಾ Citizen ಲಾಗಿನ್ ಮಾಡಿಕೊಳ್ಳುವ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ / ನಾಗರಿಕ ಸೇವಾ ಕೇಂದ್ರ / ಸ್ವತಃ ಆಸಕ್ತ ರೈತ ಮಹಿಳೆಯಾರು ಮತ್ತು ಪುರುಷರು ಅಗತ್ಯ ದಾಖಲೆಗಳೊಂದಿಗೆ FID ಸಂಖ್ಯೆಯ ಮುಖಾಂತರ ಅನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದ್ದು, ಕೊನೆಯ ದಿನದೊಳಗೆ ಶುಲ್ಕ ರಹಿತ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳು ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಬಿ.ಜಿ ಕಲಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.