A boy who ran away from home is back in his parents' arms at the age of one and a half!

ಮನೆಬಿಟ್ಟು ಹೋಗಿದ್ದ ಬಾಲಕ ಒಂದೂವರೆ ವರ್ಷದ ಬಳಿಕ ಪೋಷಕರ ಮಡಿಲಿಗೆ..!

ಹೊಸಕೋಟೆ: ಮನೆಯಲ್ಲಿ ಜೀವನ ಮಾಡಲು ಕಷ್ಟ ಎಂದು ಮನೆ ಬಿಟ್ಟು ಹೋಗಿದ್ದ ಬಾಲಕನನ್ನು (Boy) ಹೊಸಕೋಟೆ ಪೊಲೀಸರು ಒಂದೂವರೆ ವರ್ಷದ ಬಳಿಕ ಪತ್ತೆ ಹಚ್ಚಿ ಪೋಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆ ನಗರದ ಅಂಬೇಡ್ಕರ್ ಕಾಲೋನಿಯ ಸೋಮಶೇಖರ್ ಎಂಬುವವರ ಪುತ್ರ ಲೋಕಾಯುಕ್ತ(13 ವರ್ಷ) ಮನೆ ಬಿಟ್ಟು ಹೋಗಿದ್ದ ಬಾಲಕ.

ಬಾಲಕ ಲೋಕಾಯುಕ್ತನ ತಾಯಿ ಜ್ಯೋತಿ ಕಳೆದ 12 ವರ್ಷದ ಹಿಂದೆ ತೀರಿಕೊಂಡ ಪರಿಣಾಮವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಂದೆ ಸೋಮಶೇಖರ್ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರು.

ಆತನನ್ನು ಅವರ ಚಿಕ್ಕಮ್ಮ ಹೊಸಕೋಟೆ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗೆ ದಾಖಲು ಮಾಡಿದ್ದರು.

2024ರಲ್ಲಿ ಬಾಲಕ ಲೋಕಾಯುಕ್ತ ತಂದೆ ಸೋಮಶೇಖರ್ ಬಂದು ಆತನನ್ನು ನಗರದ ಅಂಬೇಡ್ಕರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದರು. ಮನೆಗೆ ಹೋಗಿ 3 ದಿನಗಳ ಕಾಲ ಇದ್ದ ಬಾಲಕ ಲೋಕಾಯುಕ್ತ ಮನೆಯಿಂದ ಸೈಕಲ್ ತೆಗೆದುಕೊಂಡು ಹೋದವನು ಸಚಿಜೆಯಾದರೂ ವಾಪಸ್ ಬಂದಿರಲಿಲ್ಲ.

ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದರೂ ಸಹ ಲೋಕಾಯುಕ್ತನ ಸುಳಿವು ಸಿಕ್ಕಿರಲಿಲ್ಲ. ಆಗ ಜನವರಿ 4 ರಂದು ಲೋಕಾಯುಕ್ತ ಣೆಯಾಗಿರುವ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿರುತ್ತೆ.

ರೈಲಿನಲ್ಲಿ ಚೆನ್ನೈಗೆ ತೆರಳಿದ್ದ ಬಾಲಕ

ಮನೆಯಿಂದ ಕಾಣೆಯಾಗಿದ್ದ ಬಾಲಕ ಲೋಕಾಯುಕ್ತ ಹೊಸಕೋಟೆಯಿಂದ ಬೆಂಗಳ್ರರಿಗೆ ತೆರಳಿ, ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ಚೆನ್ನೈ ಪ್ರಯಾಣ ಬೆಳೆಸಿದ್ದ. ಮೂರ್ನಾಲ್ಕು ದಿನಗಳ ಕಾಲ ಚೆನ್ನೈ ರೈಲು ನಿಲ್ದಾಣದಲ್ಲೆ ಓಡಾಡುತ್ತಿದ್ದ ಬಾಲಕ ಲೋಕಾಯುಕ್ತನನ್ನು ಚೆನ್ನೈ ರೈಲ್ವೇ ಪೊಲೀಸರು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಕರ್ನಾಕಟದವನು ಎಂದು ತಿಳಿದಾಕ್ಷಣ ಆತನನ್ನು ಕರ್ನಾಟಕ ರೈಲ್ವೇ ಪೊಲೀಸರ ಮೂಲಕ ಬೆಂಗಳೂರಿನ ಬಾಲಭವನಕ್ಕೆ ರವಾನೆ ಮಾಡಿದ್ದರು.

ಕಳೆದ ಒಂದೂವರೆ ವರ್ಷದಿಂದ ಲೋಕಾಯುಕ್ತ ಬಾಲಭವನದಲ್ಲೆ ಇದ್ದನು.

ತನ್ನ ಹೆಸರು ಭಾರ್ಗವ ಎಂದು ನಂಬಿಸಿದ್ದ ಲೋಕಾಯುಕ್ತ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ಬಾಲಭವನದಲ್ಲಿದ್ದ ಬಾಲಕ ಲೋಕಾಯುಕ್ತ ಮನೆಗೆ ಬಾರಲೇ ಬಾರದೆಂದು ನಿರ್ಧರಿಸಿ ತನ್ನ ಹೆಸರನ್ನು ಭಾರ್ಗವ ಎಂದು ಹೇಳಿ ನಂಬಿಸಿದ್ದ.

ಚೆನ್ನೈ‌ ರೈಲ್ವೇ ಪೊಲೀಸರಿಗೂ ಭಾರ್ಗವ ಎಂದೇ ಹೇಳಿ ನಂಬಿಸಿದ್ದ. ಇತ್ತ ಪ್ರಕರಣ ದಾಖಲು ಮಾಡಿಕೊಂಡಿದ್ದ ಹೊಸಕೋಟೆ ಪೊಲೀಸರು ಸಾಕಷ್ಟು ಹುಡುಕಾಟ ಸಹ ನಡೆಸಿದ್ದರು.

ಬೆಂಗಳೂರಿನ ಬಾಲಭವನದಲ್ಲಿ ಮಕ್ಕಳನ್ನು ಪರಿಶೀಲನೆ ಮಾಡುವ ಸಂಧರ್ಭದಲ್ಲಿ ಭಾರ್ಗವ ಎಂದೇ ಪರಿಚಯ ಮಾಡಿಕೊಂಡಿದ್ದು ಅನುಮಾನ ಬಂದು ಲೋಕಾಯುಕ್ತನ ಫೋಟೋ ಚಹರೆಯನ್ನು ನೋಡಿ ಪ್ರಶ್ನೆ ಮಾಡಿದಾಗ ಮನೆಗೆ ಹೋಗಲೇಬಾರದೆಂದು ತನ್ನ ಹೆಸರನ್ನು ಭಾರ್ಗವ ಎಂದು ಸುಳ್ಳು ಹೇಳಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.

ಅಂತಿಮವಾಗಿ ಒಂದೂವರೆ ವರ್ಷದ ಬಳಿಕ ಕಾಣೆಯಾಗಿದ್ದ ಬಾಲಕ ಲೋಕಾಯುಕ್ತನನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣವನ್ನು ಪತ್ತೆಹಚ್ಚಿದ ಹೊಸಕೋಟೆ ಡಿವೈಎಸ್ಪಿ ಮಲ್ಲೆಶಯ್ಯ, ಇನ್ಸ್ಪೆಕ್ಟರ್ ಗೋವಿಂದ್, ಪೇದೆ ಮಹಾಂತೇಶ್ ಹಾಗೂ ಸಿಬ್ಬಂದಿ ವರ್ಗದವರನ್ನು ಎಸ್ಪಿ ಸಿಕೆ.ಬಾಬಾ ಅಭಿನಂದಿಸಿದ್ದಾರೆ.

ರಾಜಕೀಯ

ಅಡ್ವಾಣಿ, ಯಡಿಯೂರಪ್ಪರಂತೆ 75 ವರ್ಷಕ್ಕೆ ಮೋದಿ ನಿವೃತ್ತಿ ಘೋಷಿಸುವರೆ..?! ಕಾವೇರಿದ ಚರ್ಚೆ

ಅಡ್ವಾಣಿ, ಯಡಿಯೂರಪ್ಪರಂತೆ 75 ವರ್ಷಕ್ಕೆ ಮೋದಿ ನಿವೃತ್ತಿ ಘೋಷಿಸುವರೆ..?! ಕಾವೇರಿದ ಚರ್ಚೆ

ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇದೇ ಸೆಪ್ಟೆಂಬರ್ ವೇಳೆಗೆ 75 ವರ್ಷಕ್ಕೆ ಕಾಲಿಡಲಿದ್ದಾರೆ.

[ccc_my_favorite_select_button post_id="110804"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ ಮಹಿಳೆ

ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ

ಗ್ರಾಮಪಂಚಾಯಿತಿ ಅದ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ

[ccc_my_favorite_select_button post_id="110702"]
ದೊಡ್ಡಬಳ್ಳಾಪುರ: ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ  ಅಂಬುಲೆನ್ಸ್ಗೆ ಆಕ್ಸಿಡೆಂಟ್..!| Video ನೋಡಿ

ದೊಡ್ಡಬಳ್ಳಾಪುರ: ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ಗೆ ಆಕ್ಸಿಡೆಂಟ್..!| Video ನೋಡಿ

ಮಹಿಳೆಯೋರ್ವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್ಗೆ (108 Ambulance) ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ (Accident) ತಾಲೂಕಿನ

[ccc_my_favorite_select_button post_id="110756"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!