ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇದೇ ಸೆಪ್ಟೆಂಬರ್ ವೇಳೆಗೆ 75 ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಈಗ ಅವರು ಅಧಿಕಾರದಲ್ಲಿ ಮುಂದುವರಿಯು ಅಥವಾ ಕೆಳಗಿಳಿಯುವ ಕುರಿತಂತೆ ರಾಷ್ಟ್ರ ರಾಜಕಾರಣದಲ್ಲಿ ಪರ-ವಿರೋಧವಾಗಿ ತೀವ್ರ ಚರ್ಚೆ ನಡೆಯುತ್ತಿದೆ.
ಹೌದು 2019ರಲ್ಲಿ ಹಾಲಿ ಗೃಹಸಚಿವ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ 75 ವರ್ಷದ ಆದವರು ಅಧಿಕಾರದಿಂದ ನಿವೃತ್ತಿ ಹಾಗೂ ಮತ್ತೆ ಅಂತವರಿಗೆ ನಮ್ಮ ಪಕ್ಷದಿಂದ ಟಿಕೆಟ್ ನೀಡದೆ ಯುವಕರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು 75ನೇ ವರ್ಷಕ್ಕೆ ಕಾಲಿಡುವ ಕಾರಣ ಬಿಜೆಪಿಯ ಒಳಗೊಳಗೆ ತೀವ್ರ ಸಂಚಲನ ಮೂಡಿಸಿದೆ.
ಏಕೆಂದರೆ 75 ವರ್ಷದ ನಿಯಮದ ಕಾರಣ ಈಗಾಗಲೇ ಬಿಜೆಪಿಯ ಘಟಾನುಘಟಿ ನಾಯಕರಾದ ಎಲ್.ಕೆ.ಅಡ್ವಾಣಿ, (LK Advani) ಆನಂದಿಬೆನ್ (Anandiben), ಮುರಳಿ ಮನೋಹರ್ ಜೋಶಿ (Murli Manohar Joshi), ಸುಮಿತ್ರಾ ಮಹಾಜನ್ (Sumitra Mahajan) ಯಶವಂತ್ ಸಿನ್ಹಾ (Yashwant Sinha), ಬಿಎಸ್ ಯಡಿಯೂರಪ್ಪ (BS Yediyurappa) ಅವರು ನಿವೃತ್ತರಾಗಿದ್ದಾರೆ.
ಈ ನಿಯಮ ನರೇಂದ್ರ ಮೋದಿ ಅವರಿಗೂ ಅನ್ವಯ ಆಗುತ್ತಾ..? ಆಗದಿದ್ದರೇ ಇದು ನಿಯಮ ಉಲ್ಲಂಘನೆ ಆಗುವುದಿಲ್ಲವೇ ಎಂಬ ಚರ್ಚೆಯನ್ನುಂಟು ಮಾಡಿದೆ.
ಈಗಾಗಲೇ ಅಮಿತ್ ಶಾ (Amith Sha) ಹಾಗೂ ಜೆಪಿ ನಡ್ಡಾ (J.P. Nadda)ಅವರು ಪ್ರತಿಕ್ರಿಯೆ ನೀಡಿದ್ದು, “ಬಿಜೆಪಿಯಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲ ಮತ್ತು ಮೋದಿ ಜಿ 2029 ರವರೆಗೆ ದೇಶವನ್ನು ಮುನ್ನಡೆಸುತ್ತಾರೆ ಮತ್ತು ಮುಂಬರುವ ಚುನಾವಣೆಗಳನ್ನು ಸಹ ಮೋದಿ ಜಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದಿದ್ದಾರೆ.
ಆದರೆ ವಿರೋಧ ಪಕ್ಷದ ನಾಯಕರು ಬಿಜೆಪಿ ಪಕ್ಷವು ಮೋದಿಯನ್ನು ನಿರ್ಬಂಧಿಸಲು ನಿರಾಕರಿಸುವ ಮೂಲಕ “ದ್ವಿಮುಖ ನೀತಿಯನ್ನು” ಪ್ರದರ್ಶಿಸುತ್ತಿದೆ ಎಂದು ಆರೋಪಿಸಿವೆ.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸೇರಿದಂತೆ ಹಲವಾರು ಶಾಸಕರು ಪ್ರಧಾನಿ 75 ವರ್ಷ ತುಂಬಿದ ನಂತರ ನಿವೃತ್ತರಾಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಸೆಪ್ಟೆಂಬರ್ 17 ರಂದು ನಿವೃತ್ತರಾಗಬೇಕಿದೆ. ಆದರೆ ಅವರು ಮುಂದುವರಿದರೆ, ಮೊದಲು ಯೋಗಿ ಆದಿತ್ಯನಾಥ್ (Yogi Adithyanath) ಅವರನ್ನು ವಜಾಗೊಳಿಸಿ ನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.