ದೊಡ್ಡಬಳ್ಳಾಪುರ: ಟ್ರಾಕ್ಟರ್ಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಾಯಗೊಂಡಿರುವ ಘಟನೆ (Accident) ನಗರದ ಟಿಬಿ ಸರ್ಕಲ್ ಮತ್ತು ಪಾಲನಜೋಗಿಹಳ್ಳಿ ನಡುವಿನ ಅಂಬರೀಶ್ ಚಿಕನ್ ಸೆಂಟರ್ ಸಮೀಪ ಇದೀಗ ಸಂಭವಿಸಿದೆ.
ಮುಂದೆ ಸಾಗುತ್ತಿದ್ದ ಟ್ರಾಕ್ಟರ್ ಸ್ಲೋ ಮಾಡಿದ ಕಾರಣ ಹಿಂದಿನಿಂದ ಬಂದ ಸ್ಕೂಟರ್ ಸವಾರ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
ಘಟನೆಯಲ್ಲಿ ಸ್ಕೂಟಿ ಸವಾರನ ತಲೆ ಪೆಟ್ಟಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಕೂಟರ್ ಮುಂಭಾಗ ಜಖಂಗೊಂಡಿದೆ.
ಈ ವೇಳೆ ರಾಜ್ಯ ಹೆದ್ದಾರಿ ಯಲಹಂಕ- ಹಿಂದೂಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.