ನಾಗಪಟ್ಟಣಂ: ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್ (Stunt Master) ಮೋಹನ್ ರಾಜ್ (Mohan Raj) ಸಿನಿಮಾ ಚಿತ್ರೀಕರಣದ ವೇಳೆ ನಿಧನರಾಗಿದ್ದಾರೆ.

ಸಿನಿಮಾ ಚಿತ್ರೀಕರಣ ವೇಳೆ ಕಾರು ಅಪಘಾತಗೊಂಡಿದ್ದು ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.
ನಿರ್ದೇಶಕ ಪಾ. ರಂಜಿತ್ ಅವರ ಮುಂಬರುವ ಚಿತ್ರ ವೆಟ್ಟುವಂ ಸೆಟ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೋಹನ್ ರಾಜ್ ದುರದೃಷ್ಟವಶಾತ್ ಪ್ರಾಣಬಿಟ್ಟಿದ್ದಾರೆ.
ಕಾರು ಎತ್ತರಕ್ಕೆ ಹಾರಬೇಕಾದ ಹೈ-ರಿಸ್ಕ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಈ ಘಟನೆ ನಡೆದಿದೆ. ಕಾರು ಸ್ಟಂಟ್ ಅಪಘಾತ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ.ರಂಜಿತ್ ‘ವೆಟ್ಟುವಂ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರ ಚಿತ್ರೀಕರಣ ತಮಿಳುನಾಡಿನ ಹಲವು ಸ್ಥಳಗಳಲ್ಲಿ ನಡೆಯುತ್ತಿದೆ.
ನಾಗಪಟ್ಟಣಂ ಜಿಲ್ಲೆಯ ಕೀಝಾಯೂರ್ ಬಳಿಯ ವೇದಮವಾಡಿ ಗ್ರಾಮದಲ್ಲಿರುವ ಪ್ರದೇಶದಲ್ಲಿ ಶೂಟಿಂಗ್ ಸಾಗುತ್ತಿದೆ. ಕಾರು ಜಂಪ್ ವೇಳೆಯೇ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಲಾಗುತ್ತಿದೆ.