Don't whine that you haven't seen the world

ಹರಿತಲೇಖನಿ ದಿನಕ್ಕೊಂದು ಕಥೆ: ಪ್ರಪಂಚ ನೋಡಿಲ್ಲ ಎಂದು ಕೊರಗಬೇಡಿ

Harithalekhani: ಒಮ್ಮೆ ಒಂದು ಶಾಲೆಯಲ್ಲಿ ಮಕ್ಕಳಿಗೆ ಮೇಷ್ಟ್ರು “ಮಕ್ಕಳೆ ನೀವು ಮರದ ಯಾವ ಭಾಗವಾಗಲು ಇಷ್ಟಾ ಪಡುತ್ತಿರಿ? ಮತ್ತು ಯಾಕೆ?” ಎಂದು ಕೇಳಿದರು. ಒಬ್ಬ ಹುಡುಗ ಎದ್ದು ನಿಂತು “ಸರ್ ನಾನು ಎಲೆಯಾಗೋಕೆ ಇಷ್ಟಪಡ್ತೀನಿ .. ಏಕೆಂದರೆ ಎಲೆ ದಣಿದು ಬಂದವರಿಗೆ ನೆರಳು, ಎಲ್ಲಾ ಜೀವಿಗಳಿಗೂ ಉಸಿರು, ಹಣ್ಣಾಗಿ ಉದುರಿದರೆ ಕೊಳೆತು ಗೊಬ್ಬರವಾಗುತ್ತದೆ. ಎಂದು ಹೇಳಿದ.

ಮೇಷ್ಟ್ರು – ಶಭಾಷ್, ಕೂತ್ಕೋ. ಮೂಲೆಯವ್ನು ನೀನು ಹೇಳು ಏನಾಗ್ತಿಯಾ ?

ಮೂಲೆಯ ಹುಡುಗ – ಸರ್ ನಾನು ಹೂವಾಗ್ತೀನಿ, ಏಕೆಂದರೆ ಹೂವನ್ನು ಎಲ್ಲರೂ ಮೆಚ್ತಾರೆ, ಅದು ಬೀರುವ ಸುಗಂಧವನ್ನು ಎಲ್ಲರೂ ಇಷ್ಡಪಡ್ತಾರೆ .. ದೇವರಿಗೂ ಕೂಡಾ ಹೂವಿನಿಂದಲೇ ಅಲಂಕಾರ ಮಾಡ್ತಾರೆ ಎಂದ.

ಮೇಷ್ಟ್ರು – ಗುಡ್. ಲಾಸ್ಟ್ ಬೆಂಚು, ನೀನ್ ಏನಾಗ್ತೀಯೋ?

ಲಾಸ್ಟ್ ಬೆಂಚು – ಸರ್ ಹಣ್ಣಾಗಲು ಬಯಸ್ತೀನಿ. ಏಕೆಂದರೆ ಹಣ್ಣು ರುಚಿರುಚಿಯಾಗಿ, ಚಿಕ್ಕಮಕ್ಳು ದೊಡ್ಡವ್ರು ಎಲ್ರೂ ಇಷ್ಟಪಡ್ತಾರೆ. ಹಸಿದವರಿಗೆ ಆಹಾರ, ಮಾರಿದರೆ ದುಡ್ಡು, ಕಷ್ಟದಲ್ಲಿ ಸಹಾಯವಾಗುತ್ತದೆ ಎಂದ.

ಮೇಷ್ಟ್ರು – ವೆರಿಗುಡ್, ಏಯ್ ಮುಂದಿನವ್ನು , ನೀನ್ ಏನಾಗ್ತೀಯೋ?

ಹುಡುಗ – ಸರ್ ರೆಂಬೆಯಾಗೋಕೆ ಇಷ್ಟಪಡ್ತೀನಿ, ಏಕೆಂದರೆ ರೆಂಬೆಗಳಲ್ಲಿ ಪಕ್ಷಿಗಳೆಲ್ಲ ಕೂತು ವಿಶ್ರಾಂತಿ ಪಡ್ಕೊತವೆ, ಗೂಡುಗಳನ್ನು ಕಟ್ಟಿ ಮರಿಗಳನ್ನು ಸಾಕ್ತವೆ, ರೆಂಬೆ ಒಣಗಿ ಬಿದ್ದರೆ ಅದನ್ನೇ ಒಲೆಗೆ ಒಟ್ಟೋದಿಕ್ಕೂ ಬಳಸ್ತೀವಿ ಎಂದ.

ಮೇಷ್ಟ್ರು – ಫೈನ್, ಕೂತ್ಕೋ. ಕೈ ಎತ್ತಿದ್ದೀಯಲ್ಲ, ನೀನ್ ಆಗೋಕೆ ಇಷ್ಟಪಡ್ತೀಯಾ?

ಕೈ ಎತ್ತಿದವನು ಸಂಕೋಚದಿಂದ ಎದ್ದು ನಿಂತು – ಸರ್ ನಾನು ಬೇರಾಗಲು ಇಷ್ಟಪಡ್ತೀನಿ. ಬೇರು ಭೂಮಿಯೊಳ್ಗಡೆ ಗಟ್ಟಿ ಮಣ್ಣನ್ನು ಸೀಳ್ಕೊಂಡು ಕಷ್ಟದಿಂದ ಬೆಳೆಯುತ್ತೆ. ಬೇರಿಗೆ ಬೆಟ್ಟಗುಡ್ಡ, ಸೂರ್ಯ, ಚಂದ್ರ, ನಕ್ಷತ್ರಗಳು, ಮನುಷ್ರ್ಯು, ಪ್ರಾಣಿಪಕ್ಷಿಗಳು, ಮನೆಗಳು ಒಂದೂ ಕಾಣಿಸದೆ, ಅದು ಯಾವುದಕ್ಕೂ ಕೊರಗದೆ ತನ್ನ ಪಾಡಿಗೆ ಸತ್ವ ಹೀರಿ ಗಿಡವನ್ನು ಬೆಳೆಸುತ್ತದೆ.

ನಾನೂ ಕೂಡಾ ಪ್ರಪಂಚ ನೋಡಿಲ್ಲ, ಬೇರೂ ಕೂಡೂ ಪ್ರಪಂಚ ನೋಡಿಲ್ಲ. ಬೇರು ಕತ್ತಲಿನಲ್ಲೇ ಹುಟ್ಟಿ ಕತ್ತಲಿನಲ್ಲೇ ಕಮರಿ ಹೋಗುತ್ತದೆ. ಬೇರಿನಂತೆ ನಾನೂ ಕೂಡಾ ಅಡೆತಡೆಗಳನ್ನು ಎದುರಿಸಿ ಬೇಳೆಯಬೇಕು. ದುಃಖವಾದಾಗಲೆಲ್ಲ ಬೇರನ್ನು ನೆನೆದು ಸಮಾಧಾನ ಮಾಡ್ಕೊತಿನಿ ಎಂದ.

ಮೇಷ್ಟ್ರು ಅತ್ಯಾನಂದದಿಂದ ಆ ಅಂಧ ಹುಡುಗನ ಕೆನ್ನೆಗಳನ್ನು ಚಿವುಟಿ ಮುದ್ದಿಸಿ ಭಾವುಕರಾದರು.

ಕೃಪೆ; ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="111193"]
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.

[ccc_my_favorite_select_button post_id="111198"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಠಾಣೆ ಆವರಣದಲ್ಲಿರುವ ರೆಸ್ಟ್ ರೂಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಘಟನೆ

[ccc_my_favorite_select_button post_id="111207"]
Accident; ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ.. ಮಾವಿನ ಕಾಯಿಗಾಗಿ ಮುಗಿಬಿದ್ದ ಜನ

Accident; ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ.. ಮಾವಿನ ಕಾಯಿಗಾಗಿ ಮುಗಿಬಿದ್ದ ಜನ

ಮಾವಿನ ಕಾಯಿ ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪೊ ಮಗುಚಿ ಬಿದ್ದಿರುವ ಘಟನೆ (Accident)

[ccc_my_favorite_select_button post_id="111232"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!