Harithalekhani; ಒಂದು ದಿನ ಕಾಡಿನಲ್ಲಿ ಬೆಳಗ್ಗೆ ಸೂರ್ಯ ಉದಯಿಸುವಾಗ ತನ್ನ ನೆರಳು ಬಹಳ ಉದ್ದ ಇದ್ದುದನ್ನ ಕಂಡ ನರಿ ನಾನು ಎಷ್ಟು ದೊಡ್ಡವನು. ಆದರೆ ನನಗೆ ಇದುವರೆಗೂ ಯಾರೂ ತಿಳಿಸದೆ ಮೋಸ ಮಾಡಿದ್ದಾರೆ ಇಂದಿನಿಂದ ನಾನೇ ಕಾಡಿಗೆ ರಾಜ ಎಂದು ತನಗೆ ತಾನೇ ಹೇಳಿ ಕೊಂಡು ತಲೆ ಎತ್ತಿ ನಡೆದು ಹೋಗುತ್ತಿತ್ತು.
ಬಹಳ ಹಸಿವಾದರೂ ಹತ್ತಿರವೇ ಬಂದರೂ ಸಣ್ಣ ಪುಟ್ಟ ಪ್ರಾಣಿಗಳನ್ನ ತಿನ್ನದೇ ಬಿಟ್ಟು ತಿಂದರೆ ಆನೆಯನ್ನು ತಿನ್ನಬೇಕು ಇಲ್ಲದಿದ್ದರೆ ಬೇಡ ಎಂದು ಹೋಗುತ್ತಿತ್ತು.
ಹಸಿವು ಹೆಚ್ಚಾಗಿ ಒಂದು ಕಡೆ ಕೂತಾಗ ಸೂರ್ಯ ನೆತ್ತಿಯ ಮೇಲೆ ಬಂದು ಇದರ ನೆರಳು ಸುತ್ತಲೂ ಹುಡುಕಿದರೂ ಕಾಣದೇ ನಾನು ಹಸಿವಿನಿಂದ ಸತ್ತು ಹೋಗಿದ್ದೇನೆಂದು ತಿಳಿದು ಮಲಗಿ ಬಿಟ್ಟಿತು.
ಸ್ವಲ್ಪ ಸಮಯದ ನಂತರ ಎಚ್ಚರವಾಗಿ ಕಣ್ಣು ಬಿಟ್ಟಾಗ ಮತ್ತೆ ನೆರಳನ್ನು ನೋಡಿ ಬದುಕಿದ್ದೇನೆ. ಆದರೆ ಹಸಿವು ಹೆಚ್ಚಾಗಿ ಹೀಗಾಗಿದೆ ಎಂದೇ ತಿಳಿದು, ಎದ್ದು ಸ್ವಲ್ಪ ದೂರ ಕಷ್ಟ ಪಟ್ಟು ನಡೆಯಿತು. ಮತ್ತೆ ಸೂರ್ಯ ಮುಳುಗಿ ಎಲ್ಲಾ ಕಡೆ ಕತ್ತಲು ಆವರಿಸಿದಾಗ ತಾನು ಈಗ ನಿಜವಾಗಲೂ ಸತ್ತು ಹೋದೆಗಿದ್ದೇನೆಂದು ಹೆದರಿ ಅಳುತ್ತಾ ಕಾಡೆಲ್ಲಾ ಕೇಳುವಂತೆ ಕೂಗಿ ಓಡಿ ಹೋಯಿತು.
ನೀತಿ: ಎಷ್ಟೋ ಜನ ತಾವು ಏನೆಂದು ಅರಿಯದೆ ಹುಸಿ ನಂಬಿಕೆಯಿಂದ ತಮ್ಮನ್ನು ತಾವೇ ದೊಡ್ಡವರೆಂದು ತಪ್ಪು ತಿಳಿದು ಬೇರೆಯವರು ತಿಳಿಸಿದಾಗ ಪೇಚಾಡುತ್ತಾರೆ.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)