ಹೈದ್ರಾಬಾದ್: ತೆಲುಗು ಚಿತ್ರರಂಗದ ಪ್ರಸಿದ್ಧ ಸಹ ನಟ ಫಿಶ್ ವೆಂಕಟ್ (ವೆಂಕಟ್ ರಾಜ್) ನಿಧನರಾಗಿದ್ದಾರೆ (No more). ಅವರಿಗೆ 53 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಮೂತ್ರಪಿಂಡದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ತೀವ್ರ ಚಿಕಿತ್ಸೆ, ಡಯಾಲಿಸಿಸ್ ಮತ್ತು ವೆಂಟಿಲೇಟರ್ ಸಹಾಯದ ನಡುವೆಯೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸಲಿಲ್ಲ. ವೃತ್ತಿಪರ ವೈದ್ಯರ ತಂಡ ಹರಸಾಹಸಪಟ್ಟರೂ ಅವರನ್ನ ಉಳಿಸಲಾಗಲಿಲ್ಲ.
Mis u Fish Venkat Anna 🥺 pic.twitter.com/Tvg8qxy8jg
— Raviteja Pavan (@RavitejaPavan1) July 18, 2025
ಫಿಶ್ ವೆಂಕಟ್ ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂ. ವೆಚ್ಚ ಆಗುವ ಸಾಧ್ಯತೆ ಇತ್ತು. ಇದಕ್ಕಾಗಿ ಅವರ ಕುಟುಂಬವು ಚಿತ್ರರಂಗದ ಜೊತೆಗೂಡಿ ಸಾರ್ವಜನಿಕರಿಂದ ಸಹಾಯ ಕೋರುತ್ತಿತ್ತು.
ಈ ಬಗ್ಗೆ ಟಾಲಿವುಡ್‌ನ ಹಲವು ಕಲಾವಿದರು, ನಿರ್ಮಾಪಕರು ಹಾಗೂ ರಾಜಕಾರಣಿಗಳು ಸಹಾಯದ ಹಸ್ತ ಚಾಚಿದ್ದರು. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಸಹ ವೆಂಕಟ್ ಕುಟುಂಬಕ್ಕೆ ನೆರವು ನೀಡಿದ್ದರು.
ಅಭಿಮಾನಿಗಳು ಫಿಶ್ ವೆಂಕಟ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಂತೆಯೇ, ಅವರ ಸಾವಿನ ಸುದ್ದಿ ಚಿತ್ರರಂಗದಲ್ಲಿ ನೋವು ಹಾಗೂ ಶೋಕದ ಛಾಯೆ ಆವರಿಸಿದೆ.
ಹಲವು ನಟ-ನಟಿಯರು, ನಿರ್ದೇಶಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.