ಕೊರಟಗೆರೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಬೇಕರಿಗೆ ನುಗ್ಗಿದ ಪರಿಣಾಮ, ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ (Accident) ಕೊರಟಗೆರೆ ತಾಲ್ಲೂಕಿನ ಕೋಳಾಲ ಬಳಿ ಸಂಭವಿಸಿದೆ.
ಗೊಬ್ಬರ ತುಂಬಿಕೊಂಡು ಸಾಗುತ್ತಿದ್ದ ಲಾರಿ ಬ್ರೆಕ್ ಫೇಲ್ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ರಂಗಶಾಮಯ್ಯ (65 ವರ್ಷ), ಪುರದಳ್ಳಿಯ ಬೈಲಪ್ಪ (65 ವರ್ಷ) ಸಾವನಪ್ಪಿದ್ದು, ಕಾಂತರಾಜು, ಜಯಣ್ಣ, ಸಿದ್ದಗಂಗಮ್ಮ, ಮೋಹನ್‌ಕುಮಾರ್ ಗಾಯಗೊಂಡಿದ್ದಾರೆ.
ಆರು ಜನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.