ದೊಡ್ಡಬಳ್ಳಾಪುರ: ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದೊಡ್ಡಬಳ್ಳಾಪುರದ ಅವಿಘ್ನ ಕಬಡ್ಡಿ ಕ್ಲಬ್‌ನ ಕಬಡ್ಡಿ ಕ್ರೀಡಾಪಟುಗಳಾದ ಭರತ್ ಕುಮಾರ್.ಎನ್ ಹಾಗೂ ಹರೀಶ್.ಆರ್ ಆಯ್ಕೆಯಾಗಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಅಮೆಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ವತಿಯಿಂದ ಚಂಡೀಗಢದ ಪಂಚಕುದಲ್ಲಿ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯಲಿದೆ.
ಈ ಪಂದ್ಯಾವಳಿಗೆ ಆಯ್ಕೆಯಾದ ದೊಡ್ಡಬಳ್ಳಾಪುರದ ಕ್ರೀಡಾಪಟುಗಳಿಗೆ ನಗರಸಭಾ ಸದಸ್ಯ ಹೆಚ್.ಹೆಸ್.ಶಿವಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ದೇವಾಂಗ ಮಂಡಲಿ ನಿರ್ದೇಶಕ ಕುಮಾರ್ ಅಭಿನಂದಿಸಿ ಬೀಳ್ಕೊಟ್ಟರು.