ದೊಡ್ಡಬಳ್ಳಾಪುರ; ಫ್ರೂಟ್ಸ್ ಐಡಿ (Fruits id) ತಂತ್ರಾಂಶದಲ್ಲಿನ ಎಡವಟ್ಟಿಗೆ ತಾಲೂಕಿನ ರೈತರು ಬೆಳೆ ವಿಮೆ ಮಾಡಿಸಲಾಗದೆ ಪರದಾಡುವ ಪರಿಸ್ಥಿತಿ ತಾಲೂಕಿನಲ್ಲಿ ಉಂಟಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಿಳಂಬವಾಗಿಯಾದರೂ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ನೊಂದಣಿ ಮಾಡಿಸಲು ರೈತರು ಪರದಾಡುವಂತಾಗಿದೆ.
ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಅಂತಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಸಿಗಲಿದೆ.
ಆದರೆ ಕಂದಾಯ ಇಲಾಖೆಯಲ್ಲಿ ಪಿ ನಂಬರ್ ಒಟ್ಟುಗೂಡಿಸಿರುವುದು, ವಿವಿಧ ಬದಲಾವಣೆಯ ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆ ಉಂಟಾಗಿ, ಸಂಬಂಧವಿಲ್ಲದ ವ್ಯಕ್ತಿಗಳ ಹೆಸರಗಳು ಎಂಟ್ರಿ ಆಗುತ್ತಿದ್ದು, ಮೂಲ ರೈತರು ವಿಮೆ ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ.

ರಾಗಿ (ಮಳೆಯಾಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 340 ಪಾವತಿಸಿದರೆ ವಿಮಾ ಮೊತ್ತ 17000 ಪಡೆಯಬಹುದು.
ರಾಗಿ (ನೀರಾವರಿ ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 406 ಪಾವತಿಸಿದರೆ ವಿಮಾ ಮೊತ್ತ 20300 ಪಡೆಯಬಹುದು.
ಭತ್ತ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 746 ಪಾವತಿಸಿದರೆ ವಿಮಾ ಮೊತ್ತ 37300 ಪಡೆಯಬಹುದು.
ಮುಸುಕಿನ ಜೋಳ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 452 ಪಾವತಿಸಿದರೆ ವಿಮಾ ಮೊತ್ತ 22600 ಪಡೆಯಬಹುದು.
ಇನ್ನೂ ಮುಸುಕಿನ ಜೋಳ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 516 ಪಾವತಿಸಿದರೆ ವಿಮಾ ಮೊತ್ತ 25800 ಪಡೆಯಬಹುದು.
ಹುರಳಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 164 ಪಾವತಿಸಿದರೆ ವಿಮಾ ಮೊತ್ತ 8200 ಪಡೆಯಬಹುದು.
ನೆಲಗಡಲೆ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 436 ವತಿಸಿದರೆ ವಿಮಾ ಮೊತ್ತ 21800 ಪಡೆಯಬಹುದು.
ತೊಗರಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 384 ಪಾವತಿಸಿದರೆ ವಿಮಾ ಮೊತ್ತ 19200 ಪಡೆಯಬಹುದು.
ತೊಗರಿ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 402 ಪಾವತಿಸಿದರೆ ವಿಮಾ ಮೊತ್ತ 20100 ಪಡೆಯಬಹುದು.
ಟಮೊಟೊ ಬೆಳೆಗೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ 1132 ಪಾವತಿಸಿದರೆ ವಿಮಾ ಮೊತ್ತ 56600 ಪಡೆಯಬಹುದು. ಆದರೆ ಫ್ರೂಟ್ ಐಡಿ ತಾಂತ್ರಿಕ ಸಮಸ್ಯೆ ರೈತರನ್ನು ಯೋಜನೆಯಿಂದ ವಂಚಿತರನ್ನಾಗಿಸುತ್ತಿದೆ.
ಅಧಿಕಾರಿಗಳ ಬೇಸರ
ಈ ಕುರಿತಂತೆ ಕೃಷಿ ಅಧಿಕಾರಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದು, ಕಂದಾಯ ಇಲಾಖೆಯ ತಾಂತ್ರಿಕ ಬದಲಾವಣೆಯಿಂದಾಗಿ ಫ್ರೂಟ್ಸ್ ಐಡಿ ತಂತ್ರಾಂಶದಲ್ಲಿ ತೊಂದರೆ ಉಂಟಾಗುತ್ತಿದೆ. ಸಮಸ್ಯೆಗೆ ಒಳಗಾಗಿರುವ ರೈತರಿಗೆ ತಿದ್ದುಪಡಿ ಕಾರ್ಯ ಚಾಲನೆ ನೀಡಲಾಗಿದ್ದು, ಸಮಸ್ಯೆ ಎದುರಾದರೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.