ದೊಡ್ಡಬಳ್ಳಾಪುರ: ಸ್ಕೂಟರ್ ಸವಾರನ ಮೇಲೆ ಲಾರಿಯ ಚಕ್ರ ಹರಿದು (Accident), ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಪಾಲನಜೋಗಿಹಳ್ಳಿ ಬಳಿ ನಡೆದಿದೆ.
ಪಾಲನಜೋಗಹಳ್ಳಿಯ ಫ್ರೆಂಡ್ಸ್ ಹಾಲ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ಪ್ರದೀಪ್ (35 ವರ್ಷ) ಎಂದು ತಿಳಿದು ಬಂದಿದೆ.
ಮೃತ ಸವಾರ ಆಕ್ಟಿವೋ ಹೊಂಡದಲ್ಲಿ ದೊಡ್ಡಬಳ್ಳಾಪುರದಿಂದ ಕಂಟನಕುಂಟೆ ಮಾರ್ಗದಲ್ಲಿ ಹೋಗುವ ವೇಳೆ ಲಾರಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ವೇಳೆ ಆತ ಲಾರಿ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.