ದೊಡ್ಡಬಳ್ಳಾಪುರ: ರಾಜ್ಯ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಕರೆ ನೀಡಲಾಗಿರುವ ಧರ್ಮಸ್ಥಳ ಸತ್ಯ ಯಾತ್ರೆಗೆ ಇಂದು ಮುಂಜಾನೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ (B. Munegowda) ನೇತೃತ್ವದಲ್ಲಿ ನೂರಾರು ಮುಖಂಡರು, ಕಾರ್ಯಕರ್ತರು ತೆರಳಿದ್ದಾರೆ.
ಹಾಸನದ ಕಂದಲಿಯಲ್ಲಿ ಪಕದ ಕಾರ್ಯಕರ್ತರು ಬೆ.7ರಿಂದ 10 ಗಂಟೆಯ ವರೆಗೆ ಸಮಾವೇಶಗೊಳ್ಳಲಿದ್ದಾರೆ.
ಹಾಸನದಿಂದ ಶಿರಾಡಿಘಾಟ್ ಮೂಲಕ ಯಾತ್ರೆ ಧರ್ಮಸ್ಥಳವನ್ನು ಸೇರುವ ಕಾರ್ಯಕ್ರಮವಿದೆ. ಕೊಟ್ಟಿಗೆಹಾರ, ಸಂಪಾಜೆ ಘಾಟ್, ಆಗುಂಬೆ ಹಾಗೂ ಚಾರ್ಮಾಡಿ ಘಾಟ್ ಮೂಲಕ ಬರುವವರಿಗೆ ಭಾನುವಾರ ಮಧ್ಯಾಹ್ನ ಒಂದು ಗಂಟೆಯೊಳಗೆ ನೇತ್ರಾವತಿ ನದಿ ಬಳಿಯ ಪಾರ್ಕಿಂಗ್ ಸ್ಥಳ ತಲುಪುವಂತೆ ಸೂಚನೆ ನೀಡಿದ್ದಾರೆ.
ಎಲ್ಲರಿಗೂ ಗುರುತಿನ ಚೀಟಿ ವಿತರಿಸಿ ನೇತ್ರಾವತಿ ನದಿ ಬಳಿಯ ಪಾರ್ಕಿಂಗ್ ಸ್ಥಳದಿಂದ ಧರ್ಮಸ್ಥಳದವರೆಗೆ ಒಂದು ಕಿ.ಮೀ.ಪಾದಯಾತ್ರೆ ಮಾಡಲು ಉದ್ದೇಶಿಸಲಾಗಿದೆ. ಬಳಿಕ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅನಂತರ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯಲಿದ್ದಾರೆ.
ಈ ಯಾತ್ರೆಯ ವೇಳೆ ಪ್ರಮುಖವಾಗಿ ಧರ್ಮ ಸ್ಥಳದ ವಿರುದ್ದ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಆದ್ದ ರಿಂದ ಪ್ರಕರಣ ವನ್ನು ಎನ್‌ಐಎಗೆ ಹಸ್ತಾಂತರಿಸ ಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ.