
ಬೆಂಗಳೂರು ಉತ್ತರ ತಾಲ್ಲೂಕು: ಕೃಷಿ (Agricultural) ಇಲಾಖೆಯಿಂದ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ಯಲಹಂಕ ಹಾಗೂ ಬೆಂಗಳೂರು ಪೂರ್ವ ತಾಲ್ಲೂಕುಗಳಿಂದ 2025-26ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ ಬೆಳೆಗಳಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸಲು ಕೃಷಿ ಇಲಾಖೆ ವತಿಯಿಂದ ವಿವಿಧ ಕೃಷಿ ಯಂತ್ರೋಪಕರಣಗಳು ಹಾಗೂ ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ರಿಯಾತಿ ದರದಲ್ಲಿ ವಿತರಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಗತ್ಯ ದಾಖಲಾತಿಗಳಾದ ಪಹಣಿ, ಕೃಷಿ ಬೆಳೆ ದೃಢೀಕರಣ ಪತ್ರ, ಕೊಳವೆ ಬಾವಿ (ನೀರಾವರಿ ಮೂಲ ದೃಢೀಕರಣ ಪತ್ರ), ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ನಿರಾಕ್ಷೇಪಣೆ ಪತ್ರ, 100 ರೂ. ಸ್ಟಾಂಪ್ ಪೇಪರ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಪ್ರತಿ. 2 ಪಾಸ್ ಪೋರ್ಟ್ ಭಾವಚಿತ್ರ, ಪ.ಜಾತಿ/ಪ.ಪಂಗಡ ರೈತರು ಜಾತಿ ಪ್ರಮಾಣ ಪತ್ರಗಳ ದಾಖಲಾತಿಗಳನ್ನು ಅರ್ಜಿಯೊಂದಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಒದಗಿಸಿ ಕೆ.ಕಿಸಾನ್ ತಂತ್ರಾಂಶದಲ್ಲಿ ನೊಂದಾಸಿಕೊಂಡು ಜೇಷ್ಠತಾ ಆಧಾರದ ಮೇಲೆ ತುಂತುರು/ಹನಿ ನೀರಾವರಿ ಘಟಕಗಳನ್ನು ಸಹಾಯಧನದಡಿಯಲ್ಲಿ ಪಡೆಯಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ, ಬೆಂಗಳೂರು ಉತ್ತರ ತಾಲ್ಲೂಕು ಕಛೇರಿಯನ್ನು ಸಂರ್ಪಕಿಸಬಹುದೆಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರೂಪ.ವಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.