ಬೆಂಗಳೂರು ನಗರ ಜಿಲ್ಲೆ: ಜಿಲ್ಲಾ ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ ಇಲ್ಲಿ ಸ್ವಯಂ ಸೇವಕ ಗೃಹರಕ್ಷಕರ (Home guards) ಖಾಲಿ ಇರುವ ಸ್ಥಾನಗಳ ಭರ್ತಿ ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. 20 ವರ್ಷದಿಂದ 50 ವರ್ಷಗಳ ವಯೋಮಿತಿ ಒಳಗಿರಬೇಕು. ಗೃಹರಕ್ಷಣೆ ಸದಸ್ಯತ್ವವು ಖಾಯಂ ಹುದ್ದೆ ಆಗಿರುವುದಿಲ್ಲ.
ಅರ್ಜಿಯನ್ನು ಗೃಹ ರಕ್ಷಕ ಸದಸ್ಯತ್ವ ಸಮಾದೇಷ್ಟರವರ ಕಛೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಆಗ್ನಿಶಾಮಕ ಠಾಣೆ ಪಕ್ಕ, ರಾಜಾಜನಿಗರ, ಬೆಂಗಳೂರು ಇಲ್ಲಿ ಭೇಟಿ ನೀಡಿ ಅಕ್ಟೋಬರ್ 03 ರಿಂದ 31 ರವರೆಗೆ (ಕೆಲಸದ ದಿನಗಳಲ್ಲಿ) ಮಧ್ಯಾಹ್ನ 2.30 ಗಂಟೆಯಿಂದ 5.00 ಗಂಟೆಯವರಿಗೆ ಉಚಿತವಾಗಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23142852 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆಯ ಗೃಹರಕ್ಷಕ ದಳದ ಕಮಾಂಡೆಂಟ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.