ದೊಡ್ಡಬಳ್ಳಾಪುರ: ಸುಮಾರು 35 ವರ್ಷದ ಅರಿಚಿತ ವ್ಯಕ್ತಿಯೋರ್ವ ರೈಲಿಗೆ (Train) ಸಿಲುಕಿ ಸಾವನಪ್ಪಿರುವ ಘಟನೆ ನಗರದ ರೈಲು ನಿಲ್ದಾಣದ ವೇದಿಕೆ 2&3 ರ Down ರೈಲ್ವೆ ಹಳಿ ಬಳಿ ನಡೆದಿದೆ.
ಈ ಕುರಿತಂತೆ ಯಶವಂತಪುರ ರೈಲ್ವೆ ಪೋಲಿಸ್ ಠಾಣೆ UDR.ನಂ. 175/2025 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
ಚಹರೆ: 170 ಸೆಂ.ಮೀ ಎತ್ತರ, ಎಣ್ಣೆ ಕೆಂಪು ಮೈ ಬಣ್ಣ ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ತಲೆ ಕೂದಲು ಇದ್ದು, ಕಪ್ಪನೆಯ ಮೀಸೆ ಬಿಟ್ಟಿದ್ದು, ಸಾಧಾರಣ ನೀಳವಾದ ಮೈಕಟ್ಟು ಹೊಂದಿರುತ್ತಾರೆ.
ಬಟ್ಟೆಗಳು: ಕಪ್ಪು ಬಣ್ಣದ ಟೀ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಒಂದು ಜೊತೆ ಚಪ್ಪಲಿಗಳು ಧರಿಸಿದ್ದಾನೆ.
ಮೃತನ ವಾರಸುದಾರರು ಯಾರಾದರು ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9108630967, 9902193960, ರೈಲ್ವೆ PSI 9480802118 ಸಂಪರ್ಕಿಸಲು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.