ದೊಡ್ಡಬಳ್ಳಾಪುರ: ಇದೇ ಶುಕ್ರವಾರದಿಂದ (ಅ.10) ಮೂರು ದಿನಗಳ ಕಾಲ ಶಿವಮೊಗ್ಗದಲ್ಲಿ ನಡೆಯುವ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ (Football tournament) ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಅಜಾಕ್ಸ್ ಸರ್ಕಾರಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ತಂಡದ ನಾಯಕ ರಿತಿಕ್ ಕುಮಾರ್, ತರಬೇತುದಾರ ಚಿರಂಜೀವಿ ನೇತೃತ್ವದಲ್ಲಿ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾವಳಿಗಳನ್ನು ಆಡಲು ತೆರಳುತ್ತಿರುವ ವಿದ್ಯಾರ್ಥಿಗಳನ್ನು ಎಸ್‌ಡಿಎಂಸಿ ಹಾಗೂ ಶಾಲಾ ಸಿಬ್ಬಂದಿಗಳು ಅಭಿನಂದಿಸಿ, ಬಿಳ್ಕೊಟ್ಟರು.
ಈ ವೇಳೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹೆಚ್.ಆರ್.ಆನಂದ್, ಸದಸ್ಯರಾದ ಗೌರೀಶ್, ಶಿವಲೀಲಾ, ಮುಖ್ಯ ಶಿಕ್ಷಕಿ ಆರ್ ರಾಜೇಶ್ವರಿ, ಪರಿಕ್ರಮ ಸಂಸ್ಥೆಯ ಕಿರಣ್, ಚಿರಂಜೀವಿ, ನರಸಿಂಹಮೂರ್ತಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಎಂ ಎಸ್ ರಾಜ ಶೇಖರ್, ಜಂಟಿ ಕಾರ್ಯದರ್ಶಿ ಶ್ರೀಧರ್, ತಾಯಪ್ಪ ನಡುವಿನಮನಿ ಹಾಜರಿದ್ದರು.